ರಾಷ್ಟ್ರೀಯ

ಆಸ್ಪತ್ರೆಗೆ ದಾಖಲಾಗಲು ಫುಟ್ ಪಾತ್ ನಲ್ಲಿ ಕಾಯುತ್ತಿರುವ ಕೊರೋನಾ ವೈರಸ್ ರೋಗಿಗಳು

Pinterest LinkedIn Tumblr


ಇಟವಾ: ಕೊರೋನಾ ಸೋಂಕಿತ ರೋಗಿಗಳು ಆಸ್ಪತ್ರೆಗೆ ದಾಖಲಾಗಲು ಪುಟ್ ಬಾತ್ ನಲ್ಲಿ ಗಂಟೆಗಟ್ಟಲೇ ಕಾದು ಕುಳಿತಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಗುರುವಾರ ಬೆಳಿಗ್ಗೆ, ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಅವರನ್ನು ಆಸ್ಪತ್ರೆಯಲ್ಲಿ ಮೀಸಲಾದ ವಾರ್ಡ್‌ಗೆ ದಾಖಲಿಸುವ ಮೊದಲು ರೋಗಿಗಳು ಫುಟ್ ಪಾತ್ ನಲ್ಲಿ ಕಾದು ಕುಳಿದಿದ್ದರು.

ಉತ್ತರ ಪ್ರದೇಶ ಸಾಯ್ ಫಾಯ್ ನ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಫ್ಲೂ ಹೊರರೋಗಿ ವಿಭಾಗದ ಗೇಟ್‌ಗಳ ಹೊರಗೆ ಈ ವಿಲಕ್ಷಣ ಘಟನೆ ನಡೆದಿದೆ.

ಈ ಕೊರೋನಾ ರೋಗಿಗಳನ್ನು ಪಶ್ಚಿಮ ಉತ್ತರ ಪ್ರದೇಶದ ನಗರದಿಂದ ಇಲ್ಲಿಗೆ ವರ್ಗಾಯಿಸಲಾಗಿದೆ. ಆಗ್ರಾದಿಂದ 116 ಕಿಮೀ ದೂರದಲ್ಲಿರುವ ಈ ಆಸ್ಪತ್ರೆಗೆ ಸರ್ಕಾರಿ ಬಸ್ ನಲ್ಲಿ ರೋಗಿಗಳು ಆಗಮಿಸಿದ್ದು, ರಸ್ತೆಯಲ್ಲಿ ಕೊರೋನಾ ಸೋಂಕಿತರು ಕಾದು ಕುಳಿತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ರೋಗಿಗಳು ಕೇವಲ ಮಾಸ್ಕ್ ಮಾತ್ರ ಧರಿಸಿದ್ದು ಬೇರೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ.

Comments are closed.