ರಾಷ್ಟ್ರೀಯ

ಬ್ಯಾಂಕ್ ಖಾತೆದಾರರಿಗೆ Electronic Card ನೀಡಲು RBIನಿಂದ ಅನುಮತಿ

Pinterest LinkedIn Tumblr


ನವದೆಹಲಿ: ದೇಶಾದ್ಯಂತ ಇರುವ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ ಗ್ರಾಹಕರಿಗೆ ಶೀಘ್ರವೇ ಸಂತಸದ ಸುದ್ದಿಯೊಂದು ಹೊರಬೀಳಲಿದೆ. ಹೌದು, ಈ ಕುರಿತು ಘೋಷಣೆ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮುಂಬರುವ ದಿನಗಳಲ್ಲಿ ಶೀಘ್ರವೇ ಬ್ಯಾಂಕ್ ಗಳಿಂದ ತಮ್ಮ ಖಾತೆದಾರರಿಗೆ ಎಲೆಕ್ಟ್ರಾನಿಕ್ ಕಾರ್ಡ್ ಗಳು ವಿತರಣೆಯಾಗಲಿದೆ ಎಂದು ಹೇಳಿದೆ. ಈ ಕುರಿತಾದ ತನ್ನ ನಿಯಮಗಳನ್ನು ಸಡಿಲುಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಓವರ್ ಡ್ರಾಫ್ಟ್ ಹೊಂದಿರುವ ಗಗ್ರಾಹಕರಿಗೆ ಇಲೆಕ್ಟ್ರಾನಿಕ್ ಕಾರ್ಡ್ ಜಾರಿಗೊಳಿಸುವ ಅನುಮತಿ ನೀಡಿದೆ. ವೈಯಕ್ತಿಕ ಸಾಲದ ಮಾದರಿಯಲ್ಲಿರುವ ಓವರ್ ಡ್ರಾಫ್ಟ್ ಖಾತೆಗಳಿಗೆ ಈ ಸೌಲಭ್ಯ ನೀಡಲಾಗುವುದು ಎಂದು ಆರ್.ಬಿ.ಐ ಹೇಳಿದೆ.

ಈ ಖಾತೆದಾರರಿಗೆ ಸಿಗಲಿದೆ ಲಾಭ
ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ 2015ರ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕ್ ಗಳಲ್ಲಿ ಉಳಿತಾಯ ಹಾಗೂ ಚಾಲ್ತಿ ಖಾತೆ ಹೊಂದಿದ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಜಾರಿಗೊಳಿಸುವ ಅನುಮತಿ ನೀಡಲಾಗಿದೆ. ಆದರೆ, ಈ ಸೌಲಭ್ಯ ಕ್ರೆಡಿಟ್ ಕಾರ್ಡ್ ಹಾಗೂ ಲೋನ್ ಅಕೌಂಟ್ ಹೊಂದಿರುವವರಿಗೆ ನೀಡಲಾಗುತ್ತಿಲ್ಲ. ಅಂದರೆ ಕೇವಲ ಓವರ್ ಡ್ರಾಫ್ಟ್ ಖಾತೆ ಹೊಂದಿದ ಗ್ರಾಹಕರು ಮಾತ್ರ ಈ ಸೌಲಭ್ಯದ ಲಾಭ ಪಡೆಯಬಹುದಾಗಿದೆ.

ಇದನ್ನು ಎಲ್ಲಿ ಬಳಸಬಹುದು?
ಇಲೆಕ್ಟ್ರಾನಿಕ್ ಕಾರ್ಡ್ ಗ್ರಾಹಕರಿಗೆ ನೀಡಲಾಗಿರುವ ಓವರ್ ಡ್ರಾಫ್ಟ್ ಸೌಲಭ್ಯದ ಅವಧಿಗಿಂತ ಹೆಚ್ಚಿನ ಅವಧಿಗಾಗಿ ನೀಡಲಾಗುವುದಿಲ್ಲ ಎಂದೂ ಕೂಡ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಕೇವಲ ಭಾರತ ದೇಶದಲ್ಲಿನ ವ್ಯವಹಾರಗಳಿಗೆ ಮಾತ್ರ ಇದನ್ನು ಬಳಸಬಹುದಾಗಿದೆ ಎಂದೂ ಸಹ ಕೇಂದ್ರೀಯ ಬ್ಯಾಂಕ್ ಹೇಳಿದೆ.

ಶೀಘ್ರವೇ ಇದು ಜಾರಿಗೆ ಬರಲಿದೆ
ಈ ವಿಶೇಷ ಸೌಲಭ್ಯವನ್ನು ಜಾರಿಗೊಳಿಸುವ ಮೊದಲು ಎಲ್ಲಾ ಬ್ಯಾಂಕ್ ಗಳ ನಿರ್ದೇಶಕರ ಮಂಡಳಿಗಳು ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಬೇಕು ಎಂದು RBI ಹೇಳಿದೆ. ಸದ್ಯ ಬ್ಯಾಂಕ್ ಗಳು ಶೀಘ್ರದಲ್ಲಿಯೇ ತನ್ನ ಗ್ರಾಹಕರಿಗೆ ಈ ಸೌಲಭ್ಯ ಒದಗಿಸಲಿವೆ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.

ಓವರ್ ಡ್ರಾಫ್ಟ್ ಸೌಲಭ್ಯ ಅಂದರೇನು?
ಓವರ್ ಡ್ರಾಫ್ಟ್ ಒಂದು ವಿಶೇಷ ಸೌಲಭ್ಯವಾಗಿದ್ದು, ಇದನ್ನು ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ನೀಡುತ್ತವೆ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬ್ಯಾಲನ್ಸ್ ಇಲ್ಲದೆ ಹೋದ ಸಂದರ್ಭದಲ್ಲಿ ನೀವು ಈ ಸೌಲಭ್ಯವನ್ನು ಬಳಸಿ ಹಣ ಪಡೆಯಬಹುದಾಗಿದೆ. ಆದರೆ, ಈ ಮೂಲಕ ನೀವು ಪಡೆಯುವ ಹಣಕ್ಕೆ ಬ್ಯಾಂಕ್ ಗಳು ಬಡ್ಡಿ ಕೂಡ ವಿಧಿಸುತ್ತವೆ. ಬ್ಯಾಂಕ್ ಗಳು ಪ್ರತಿ ಗ್ರಾಹಕರಿಗೆ ಒಂದು ಓವರ್ ಡ್ರಾಫ್ಟ್ ಮಿತಿಯನ್ನು ನಿರ್ಧರಿಸುತ್ತವೆ ಎಂಬುದು ಇಲ್ಲಿ ಉಲ್ಲೇಖನೀಯ.

Comments are closed.