ರಾಷ್ಟ್ರೀಯ

ಏಮ್ಸ್​​ ಆಸ್ಪತ್ರೆಯ ನರ್ಸ್​ಗೆ ಕೊರೋನಾ ಸೋಂಕು; 40 ಆರೋಗ್ಯ ಸಿಬ್ಬಂದಿ ಕ್ವಾರಂಟೈನ್

Pinterest LinkedIn Tumblr


ನವದೆಹಲಿ(ಏ.24): ಏಮ್ಸ್​ನ 30 ವರ್ಷದ ಪುರುಷ ಶುಶ್ರೂಷಕನಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ದಾದಿಯರು ಸೇರಿದಂತೆ ಸುಮಾರು 40 ಆರೋಗ್ಯ ಸಿಬ್ಬಂದಿ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೋಂಕಿತನ ಸಂಪರ್ಕಕ್ಕೆ ಬಂದವರನ್ನು ತಕ್ಷಣವೇ ಗುರುತಿಸಲಾಗಿದೆ ಮತ್ತು ರೋಗಿಯೊಂದಿಗೆ ಕೆಲಸ ಮಾಡಿದ್ದ 40 ಮಂದಿಯ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

ಐಸಿಯುನಲ್ಲಿದ್ದ ನಾಲ್ಕು ರೋಗಿಗಳು ಸೇರಿ ಈವರೆಗೂ ಸುಮಾರು 22 ಜನರ ಪರೀಕ್ಷಾ ಫಲಿತಾಂಶಗಳು ಹೊರಬಂದಿದ್ದು, ವರದಿ ನೆಗೆಟಿವ್​​ ಬಂದಿದೆ. ಉಳಿದವರ ಫಲಿತಾಂಶಗಳು ಕಾಯುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರ ಪ್ರಕಾರ, ನರ್ಸ್‌ಗೆ ಶನಿವಾರ ಜ್ವರ ಬಂದಿತ್ತು. ಅದೇ ದಿನ ಸಂಜೆ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳುವಂತೆ ವೈದ್ಯರು ಫೋನ್​ ಮುಖಾಂತರ ಸೂಚಿಸಿ, ಸೋಮವಾರ ಬರುವಂತೆ ಸಲಹೆ ನೀಡಿದ್ದಾರೆ. ಆದರೆ, ಸೋಮವಾರ ಕೆಲಸಕ್ಕೆ ರಜೆ ಇದ್ದುದ್ದರಿಂದ ಬುಧವಾರ ಪರೀಕ್ಷೆಗೆ ಹಾಜರಾಗಿದ್ದಾರೆ. ಸಂಜೆ ವೇಳೆ ಬಂದ ವರದಿಯಲ್ಲಿ ಪಾಸಿಟಿವ್ ಬಂದಿದೆ. ಈ ವಿಷಯ ಗುರುವಾರ ಎಲ್ಲರಿಗೂ ತಿಳಿದು ಬಂದಿದೆ. ಇಲ್ಲಿನ ಛತ್ತಾರ‌ಪುರದ ನಿವಾಸಿವಾಗಿರುವ ನರ್ಸ್ ಸದ್ಯ ಈಗ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಕೋವಿಡ್ 19 ನಿಂದ ಸಾವನ್ನಪ್ಪಿದವರ ಸಂಖ್ಯೆ 718 ಕ್ಕೆ ಏರಿದೆ ಮತ್ತು ದೇಶದಲ್ಲಿ ಶುಕ್ರವಾರ ಪ್ರಕರಣಗಳ ಸಂಖ್ಯೆ 23,077 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ಪಿಟಿಐ ಲೆಕ್ಕಾಚಾರದಲ್ಲಿ ವಿವಿಧ ರಾಜ್ಯಗಳು ಗುರುವಾರ ವರದಿ ಮಾಡಿರುವ ಪ್ರಕಾರ ದೇಶದಲ್ಲಿ 722 ಸಾವುಗಳು ಸಂಭವಿಸಿವೆ.

Comments are closed.