ಪುಣೆ: ಪುಣೆಯ ರೂಬಿ ಹಾಲ್ ಕ್ಲಿನಿಕ್ ನ 19 ನರ್ಸ್ ಗಳಿಗೆ ಮತ್ತು ಆರು ಅರೇ ವೈದ್ಯಕೀಯ ಸಿಬ್ಬಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಯಾರಿಗೂ ಕೊರೋನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪುಣೆಯ ಈ ಪ್ರಮುಖ ಖಾಸಗಿ ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ವೊಬ್ಬರಿಗೆ ಕಳೆದ ವಾರ ಕೊವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಯ ಸುಮಾರು 1 ಸಾವಿರ ಸಿಬ್ಬಂದಿಯನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ 19 ನರ್ಸ್ ಗಳು ಹಾಗೂ 6 ಅರೇ ವೈದ್ಯಕೀಯ ಸಿಬ್ಬಂದಿಗೆ ಈಗ ಪಾಸಿಟಿವ್ ಬಂದಿದೆ ಎಂದು ರೂಬಿ ಹಾಲ್ ಕ್ಲಿನಿಕ್ ನ ಸಿಇಒ ಬೋಮಿ ಭೋಟೆ ಅವರು ತಿಳಿಸಿದ್ದಾರೆ.
ಸೋಂಕಿತ ಎಲ್ಲಾ ಸಿಬ್ಬಂದಿ ಆರೋಗ್ಯ ಸ್ಥಿರವಾಗಿದ್ದು, ಈ ಎಲ್ಲರನ್ನೂ ಕ್ವಾರಂಟೇನ್ ನಲ್ಲಿಡಲಾಗಿತ್ತು ಮತ್ತು ಅವರಿಗೆ ಇದುವರೆಗೂ ಯಾವುದೇ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
Comments are closed.