ರಾಷ್ಟ್ರೀಯ

ಲಾಕ್‍ಡೌನ್: ಪತ್ನಿ ತವರು ಮನೆಯಿಂದ ಹಿಂದಿರುಗಲಿಲ್ಲ ಎಂದು ಮಾಜಿ ಪ್ರೇಯಸಿಯನ್ನೇ ಮದುವೆಯಾದ ವ್ಯಕ್ತಿ !

Pinterest LinkedIn Tumblr

ಪಾಟ್ನಾ: ಕೊರೊನಾ ವೈರಸ್‍ನಿಂದ ಇಡೀ ದೇಶದಲ್ಲಿ ಲಾಕ್‍ಡೌನ್ ಆಗಿದೆ. ಹೀಗಾಗಿ ಅನೇಕರು ತಮ್ಮ ಕುಟುಂಬದವರಿಂದ ದೂರನೇ ಉಳಿದಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ತನ್ನ ಪತ್ನಿ ತವರು ಮನೆಯಿಂದ ಹಿಂದಿರುಗಲಿಲ್ಲ ಎಂದು ತನ್ನ ಮಾಜಿ ಪ್ರೇಯಸಿಯ ಜೊತೆ ಮದುವೆಯಾಗಿರುವ ಘಟನೆ ಪಾಟ್ನಾದ ಪಾಲಿಗಂಜ್ನನಲ್ಲಿ ನಡೆದಿದೆ.

ಧೀರಜ್ ಕುಮಾರ್ ತನ್ನ ಪತ್ನಿ ಪೋಷಕರ ಮನೆಯಿಂದ ವಾಪಸ್ ಬಂದಿಲ್ಲ ಎಂದು ತನ್ನ ಮಾಜಿ ಗೆಳತಿಯನ್ನು ಮದುವೆಯಾಗಿದ್ದಾನೆ.

ಏನಿದು ಪ್ರಕರಣ?
ಮಾರ್ಚ್ ನಲ್ಲಿ ಲಾಕ್‍ಡೌನ್ ಘೋಷಿಸುವ ಮೊದಲು ಧೀರಜ್ ಪತ್ನಿ ದುಲ್ಹಿನ್ ಬಜಾರ್ ಪ್ರದೇಶದ ತನ್ನ ತಾಯಿಯ ಮನೆಗೆ ಹೋಗಿದ್ದರು. ಆದರೆ ಮೋದಿ ಮಾರ್ಚ್ 25 ರಂದು 21 ದಿನಗಳ ಲಾಕ್‍ಡೌನ್ ಘೋಷಿಸಿದ್ದರು. ಅಂದಿನಿಂದ ಎಲ್ಲಾ ವಾಹನಗಳ ಸಂಚಾರವೂ ಸ್ಥಗಿತವಾಗಿದೆ. ಆದರೆ ಧೀರಜ್, ಪತ್ನಿಗೆ ಅನೇಕ ಬಾರಿ ಫೋನ್ ಮಾಡಿ ಹೇಗಾದರೂ ಮಾಡಿ ಮನೆಗೆ ವಾಪಸ್ ಬರುವಂತೆ ಒತ್ತಾಯಿಸಿದ್ದಾನೆ. ಆದರೆ ವಾಹನಗಳಿಲ್ಲದೆ ಪತಿ ಮನೆಗೆ ಹೋಗಲು ಪತ್ನಿಗೆ ಸಾಧ್ಯವಾಗಿಲ್ಲ.

ಇತ್ತ ಮತ್ತೆ ಲಾಕ್‍ಡೌನ್ ಅನ್ನು ಮೇ 3ರ ವರೆಗೆ ವಿಸ್ತರಿಸಲಾಗಿತ್ತು. ಇದರಿಂದ ಕೋಪಗೊಂಡ ಧೀರಜ್ ಕುಮಾರ್ ಪತ್ನಿ ಮನೆಗೆ ಹಿಂದಿರುಗಿಲ್ಲ ಎಂದು ತನ್ನ ಮಾಜಿ ಪ್ರೇಯಸಿಯನ್ನು ಮದುವೆಯಾಗಲು ನಿರ್ಧರಿಸಿದ್ದನು. ಅದರಂತೆಯೇ ಆಕೆಯನ್ನು ಮದುವೆಯಾಗಿದ್ದಾನೆ.

ಪತಿಯ ಎರಡನೇ ಮದುವೆ ಬಗ್ಗೆ ತಿಳಿದು ಪತ್ನಿ ತಕ್ಷಣ ಪೊಲೀಸರನ್ನು ಸಂಪರ್ಕಿಸಿ ಪತಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಪತ್ನಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಧೀರಜ್‍ ಕುಮಾರ್‌ನನ್ನು ಪೊಲೀಸ್ ಠಾಣೆಗೆ ಕರೆಸಿದ್ದಾರೆ. ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Comments are closed.