ರಾಷ್ಟ್ರೀಯ

ದೀಪ ಬೆಳಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ ಭಾರತೀಯರು

Pinterest LinkedIn Tumblr


ನವದೆಹಲಿ(ಏ.05): ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಕ ಮಹಾಮಾರಿ ಕೊರೋನಾ ಸೋಂಕು ಭಾರತದಲ್ಲೂ ರುದ್ರನರ್ತನ ತೋರುತ್ತಿದೆ. ಮಾರಕ ಸೋಂಕು ನಿಯಂತ್ರಣಕ್ಕಾಗಿ ಇಡೀ ದೇಶವನ್ನು 21 ದಿನಗಳ ಕಾಲ ಲಾಕ್​ಡೌನ್​ ಮಾಡಿ 14 ದಿನಗಳು ಕಳೆದರೂ ಸೋಂಕು ನಿಯಂತ್ರಣಕ್ಕೆ ಬಾರದೆ ದಿನೇದಿನೇ ವ್ಯಾಪಕವಾಗಿ ಹರಡುತ್ತಿದೆ. ಏತನ್ಮಧ್ಯೆ ಪ್ರಧಾನಿ ಮೋದಿ ಅವರು ಕೊರೋನಾ ವಿರುದ್ಧ ಹೋರಾಟದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಉದ್ದೇಶದಿಂದ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗುವಂತೆ ಕರೆ ನೀಡಿದ್ದರು. ಅದರಂತೆಯೇ ಈಗ ದೇಶಾದ್ಯಂತ ಇಂದು ರಾತ್ರಿ ದೀಪ ಬೆಳಗುವ ಮೂಲಕ ಕೊರೋನಾ ವಿರುದ್ಧ ನಾವೆಲ್ಲಾ ಒಗ್ಗಟ್ಟಾಗಿ ಹೋರಾಡುತ್ತಿದ್ದೇವೆ ಎಂಬ ಸಾಂಕೇತಿಕವಾಗಿ ಐಕ್ಯತೆ ಪ್ರದರ್ಶನ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟ ದೇಶದ ಜನತೆ ದೀಪ ಹಚ್ಚುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ. ಇನ್ನೂ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ತಮ್ಮ ಕುಟುಂಬದ ಜೊತೆ ದೀಪ ಬೆಳಗಿಸಿದ್ದಾರೆ. ತಮ್ಮ ನಿವಾಸದಲ್ಲಿ ಲೈಟು ಆರಿಸಿ ತಮ್ಮ ಕುಟುಂಬದ ಜೊತೆ ದೀಪ ಬೆಳಗಿಸಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​​ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬಾ ರಾಮದೇವ್, ಸಚಿವರಾದ ಶ್ರೀರಾಮುಲು, ಅಶೋಕ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಹೀಗೆ ಅನೇಕರು ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿದರು.

ಇನ್ನು ರಿಲಾಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಕೂಡ ಪ್ರಧಾನಿ ಕರೆಯಂತೆ ದೀಪ ಬೆಳಗಿಸಿದರು.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕೂಡ ತಮ್ಮ ನಿವಾಸದಲ್ಲಿ ದೀಪ ಬೆಳಗಿಸುವ ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಬೆಂಬಲಿಸಿದರು.

Comments are closed.