ರಾಷ್ಟ್ರೀಯ

ಲಾಕ್ ಡೌನ್ 2ನೇ ದಿನ: ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಇಳಿಕೆ

Pinterest LinkedIn Tumblr


ನವದೆಹಲಿ: ಕೋವಿಡ್ 19 ಭೀತಿಯಿಂದ ಭಾರತದಲ್ಲಿ ಲಾಕ್ ಡೌನ್ ಆಗಿ 2 ದಿನಗಳು ಕಳೆದಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರು ರಸ್ತೆಗಿಳಿಯದಂತೆ ಮುನ್ನೆಚ್ಚರಿಕೆ ವಹಿಸಿದ್ದು, ಅಗತ್ಯ ಸೇವೆಗಳಿಗೆ ಯಾವುದೇ ಧಕ್ಕೆಯಾಗದಂತೆ ಸಮರ್ಪಕ ಯೋಜನೆ ರೂಪಿಸಿವೆ. ಶಾಸಕರು, ಸಚಿವರು, ವಾಣಿಜ್ಯೋದ್ಯಮಿಗಳು, ಬಾಲಿವುಡ್ , ಟಾಲಿವುಡ್ ಮುಂತಾದ ನಾಯಕ ನಟ-ನಟಿಯರು ಈ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಲು ಕೈ ಜೋಡಿಸಿದ್ದು ಅಗತ್ಯ ನೆರವು ಒದಗಿಸಿದ್ದಾರೆ.

ಗುರುವಾರ ಮಹಾರಾಷ್ಟ್ರ , ಮಧ್ಯಪ್ರದೇಶ, ಕರ್ನಾಟಕ, ರಾಜಸ್ಥಾನದಲ್ಲಿ 17 ಸೋಂಕು ಪೀಡಿತರು ದೃಢಪಟ್ಟಿದ್ದು, ಭಾರತದಲ್ಲಿ ಒಟ್ಟಾರೆಯಾಗಿ ಸೋಂಕಿತರ ಪ್ರಮಾಣ 694ಕ್ಕೆ ಏರಿದೆ. ದೇಶದ ವಿವಿದೆಢೆಗಳಲ್ಲಿ ಗುರುವಾರ 88 ಖಚಿತ -ಪ್ರಕರಣಗಳು ವರದಿಯಾಗಿವೆ.

ಲಾಕ್ ಡೌನ್ ಎಂಬುದು ಕೋವಿಡ್19 ವೈರಸ್ ತಡೆಗಟ್ಟಲು ಇರುವ ಏಕೈಕ ಮಾರ್ಗ, ಇದು ಸೋಂಕಿತರ ಪ್ರಮಾಣ ಹೆಚ್ಚಾಗದಿರಲು ಸಹಾಯ ಮಾಡುತ್ತದೆ. ಭಾರತದ ಪ್ರತಿಯೊಬ್ಬರು ಮನೆಯಿಂದ ಹೊರಬರದೆ ಕೋವಿಡ್ -19 ವಿರುದ್ಧ ಹೋರಾಡಬೇಕು ಎಂದು ಎಂದು ಭಾರತದ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಜಿ20 ಸಬೆಯಲ್ಲಿ ಭಾಗವಹಿಸಿದ್ದು, ಜಾಗತಿಕವಾಗಿ ಉದ್ಭವಿಸಿರುವ ಹೊಸ ಸಮಸ್ಯೆಯ ಕುರಿತು ಮತ್ತು ಅದನ್ನು ತಡೆಗಟ್ಟುವ ವಿಧಾನದ ಕುರಿತು ಬಗ್ಗೆ ಚರ್ಚಿಸಿದ್ದಾರೆ.

ಗುರುವಾರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಬಡವರಿಗಾಗಿ 1 .70,000ಲಕ್ಷ ಕೋಟಿಯ ಗರೀಬ್ ಕಲ್ಯಾಣ್ ಯೋಜನೆಯನ್ನು ಘೋಷಿಸಿದ್ದಾರೆ.

ಭಾರತದಲ್ಲಿ ಗುರುವಾರ ಕೋವಿಡ್ 19 ಸೋಂಕಿನಿಂದ 5 ಜನರು ಮೃತಪಟ್ಟಿದ್ದಾರೆ. ಶ್ರೀನಗರದ ಆಸ್ಪತ್ರೆಯಲ್ಲಿ 65 ವರ್ಷದ ವೃದ್ಧ ಕೊನೆಯುಸಿರೆಳೆದರೆ, ಮುಂಬೈನಲ್ಲಿ ಮಾರ್ಚ್ 24ರಂದು ಸಾವನ್ನಪ್ಪಿದ್ದ ಮಹಿಳೆಗೆ ಪಾಸಿಟಿವ್ ವರದಿ ಬಂದಿದೆ. ಕರ್ನಾಟಕದಲ್ಲಿ 75 ವರ್ಷದ ವೃದ್ಧೆ, ರಾಜಸ್ಥಾನದಲ್ಲಿ 73 ವರ್ಷದ ವೃದ್ಧ, ಮಧ್ಯಪ್ರದೇಶದಲ್ಲಿ 35 ವರ್ಷದ ವ್ಯಕ್ತಿ ಈ ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ.

ಹಾಗಾಗಿ ಗುಜರಾತ್ -ಮಹಾರಾಷ್ಟ್ರದಲ್ಲಿ 3 ಜನರು, ಕರ್ನಾಕದಲ್ಲಿ 2, ಮಧ್ಯಪ್ರದೇಶ, ತಮಿಳುನಾಡು, ಬಿಹಾರ, ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಆದರೂ ಮುಂಬೈನಲ್ಲಿ ಮೃತಪಟ್ಟ ಮಹಿಳೆ ಕೋವಿಡ್ 19 ನಿಂದ ಸಾವನ್ನಪ್ಪಿದ್ದಾರೆ ಎಂದು ಇನ್ನೂ ಖಚಿತವಾಗಿಲ್ಲ..

Comments are closed.