ರಾಷ್ಟ್ರೀಯ

14 ದಿನಗಳ ನಂತರವೂ ಕೊರೋನಾ ವೈರಸ್ ಕಾಣಿಸಿಕೊಳ್ಳಬಹುದು  

Pinterest LinkedIn Tumblr


ದಿಲ್ಲಿ: ಕೋವಿಡ್‌ 19 ಲಕ್ಷಣಗಳು ಕೇವಲ 14 ದಿನಗಳಲ್ಲೇ ಕಾಣಿಸಿಕೊಳ್ಳಬೇಕೆಂದೇನಿಲ್ಲ ಎರಡು ವಾರಗಳ ಬಳಿಕವೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ. ಎಲ್ಲರಲ್ಲೂ ಒಂದೇ ರೀತಿಯಾಗಿ ಕೋವಿಡ್‌ 19 ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಕೆಲವರಲ್ಲಿ 2 3 ದಿನಕ್ಕೆ ಕಾಣಿಸಿಕೊಳ್ಳಬಹುದಾಗಿದ್ದು ಮತ್ತೂ ಕೆಲವರಲ್ಲಿ ವಾರದ ಬಳಿಕ ಕಾಣಿಸಿಕೊಳ್ಳಬಹುದು ಎಂದು ಹೇಳಿದೆ.

ಎರಡು ವಾರಗಳ ಬಳಿಕವೂ ಕೋವಿಡ್‌ 19 ಲಕ್ಷಣಗಳು ಕಾಣಿಸಿಕೊಳ್ಳಬಹುದಾಗಿದೆ. ಸೋಂಕಿತರ ಸಂಪರ್ಕಕ್ಕೆ ಹೋದವರಿಗೆ 14 ದಿನಗಳ ಕಾಲ ಪ್ರತ್ಯೇಕವಾಗಿರಲು ಎಂದು ಸೂಚಿಸಲಾಗಿದೆ. ಏಕೆಮದರೆ ಕೋವಿಡ್‌ 19 ಸೋಂಕು ತಗುಲಿದ್ದರೆ ಆ ಎರಡು ವಾರಗಳೊಳಗೆ ಯಾವುದಾದರೂ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸೋಂಕು ನಿಯಂತ್ರಣ ಮತ್ತು ಆಸ್ಪತ್ರೆ ಸಾಂಕ್ರಾಮಿಕ ರೋಗ ಶಾಸ್ತ್ರದ ಜರ್ನಲ್‌ ನಲ್ಲಿ ಈ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದೆ. ಜನವರಿ 20ರಿಂದ ಫೆಬ್ರವರಿ 12ರ ವರೆಗೆ ಒಟ್ಟು 175 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಕೆಲವರಿಗೆ 14 ದಿನಗಳ ಗೃಹ ಬಂಧನದಲ್ಲಿಡಲಾಗಿತ್ತು. ಅಷ್ಟರಲ್ಲೇ ಲಕ್ಷಣಗಳು ಕಂಡು ಬಂದಿತ್ತು. ಆದರೆ ಇನ್ನೂ ಕೆಲವರಿಗೆ ಈ ಅವಧಿಯಲ್ಲಿ ಲಕ್ಷಣಗಳು ಪತ್ತೆಯಾಗಿರಲಿಲ್ಲ.

ಈ ಅಧ್ಯಯನದ ಸಂದರ್ಭದಲ್ಲಿ ಮಧ್ಯವಯಸ್ಕರನ್ನೇ ಹೆಚ್ಚಾಗಿ ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಸುಮಾರು ಶೇ.59.8 ಮಂದಿ ದುಬಾೖ ಪ್ರಾಂತ್ಯಕ್ಕೆ ಪ್ರಯಾಣಿಸಿದ್ದರು. ಉಳಿದವರು ಹೀಗೆ ಸೋಂಕಿತರ ಸಂಪರ್ಕಕ್ಕೆ ಹೋಗಿ ವೈರಸ್‌ ತಗುಲಿಸಿಕೊಂಡವರಾಗಿದ್ದಾರೆ.

Comments are closed.