ರಾಷ್ಟ್ರೀಯ

ನೂತನ ರಾಜ್ಯಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ರಂಜನ್ ಗೊಗೊಯ್

Pinterest LinkedIn Tumblr

ನವದೆಹಲಿ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಗುರುವಾರ (ಮಾರ್ಚ್ 19) ನೂತನ ರಾಜ್ಯಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೊಗೊಯ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ್ದರು.

ಗೊಗೊಯ್ ಹೆಸರನ್ನು ಗೃಹ ಸಚಿವಾಲಯ ಸೋಮವಾರ ರಾತ್ರಿ ಅಧಿಸೂಚನೆಯಲ್ಲಿ ಪ್ರಕಟಿಸಿತ್ತು. ಅದರಂತೆ ರಾಷ್ಟ್ರಪತಿಗಳು ತನಗೆ ನೀಡಿರುವ ಅಧಿಕಾರವನ್ನು “ಭಾರತದ ಸಂವಿಧಾನದ 80 ನೇ ಪರಿಚ್ಚೇಧ (1) ರ ಉಪ-ಷರತ್ತು (ಎ), ಅನ್ವಯ ರಂಜನ್ ಗೊಗೊಯ್ ಅವರನ್ನು ನಾಮನಿರ್ದೇಶನ ಮಾಡಲು ಆ ಆರ್ಟಿಕಲ್ ನ ಷರತ್ತು (3) ನೊಂದಿಗೆ ಅನುಮತಿಸಲಾಗಿದೆ”

ನ್ಯಾಯಶಾಸ್ತ್ರಜ್ಞ ಕೆಟಿಎಸ್ ತುಳಸಿ ಅವರ ನಿವೃತ್ತಿಯ ನಂತರ ತೆರವಾಗಿದ್ದ ಹುದ್ದೆಗೆ ಗೊಗೊಯ್ ನೇಮಕವಾಗಿದ್ದಾರೆ.

65 ವರ್ಷದ ರಂಜನ್ ಗೊಗೊಯ್ ಅವರು 13 ತಿಂಗಳ ಅಧಿಕಾರಾವಧಿಯ ನಂತರ ಕಳೆದ ವರ್ಷದ ನವೆಂಬರ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದರು. ಸುಪ್ರೀಂ ಕೋರ್ಟ್‌ನಲ್ಲಿದ್ದ ಸಮಯದಲ್ಲಿ, ಸಲಿಂಗಕಾಮ, ಶಬರಿಮಳ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ ಮತ್ತು ರಾಫೆಲ್ ಜೆಟ್ ಒಪ್ಪಂದ, ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಹಾಗೂ ಅಯೋಧ್ಯೆ ಭೂವಿವಾದದ ಕುರಿತು ಐತಿಹಾಸಿಕ ತೀರ್ಪು ನೀಡಿದ್ದರು.

Comments are closed.