ರಾಷ್ಟ್ರೀಯ

ಕೊರೊನಾ: ನವವಿವಾಹಿತೆಗೆ ಶೌಚಾಲಯಕ್ಕೂ ಬಿಡದ ಪತಿ ಕುಟುಂಬದವರು!

Pinterest LinkedIn Tumblr


ಒಡಿಶಾ: ಕೊರೊನಾ ವೈರಸ್ ಶಂಕೆ ವ್ಯಕ್ತಪಡಿಸಿ ನಿರಂತರ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ವಾರಗಳ ಹಿಂದಷ್ಟೆ ಮದುವೆಯಾಗಿದ್ದ ನವವಿವಾಹಿತೆಯೋರ್ವರು ಆರೋಪ ಮಾಡಿದ ಘಟನೆ ನಬರಂಗ್ ಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮಾರ್ಚ್ 2 ರಂದು ಮದುವೆಯಾಗಿ ಗಂಡನ ಮನೆಗೆ ಬಂದಿದ್ದ ಯುವತಿಗೆ ಶೀತ, ಜ್ವರ, ಕೆಮ್ಮು ಆರಂಭವಾಗಿತ್ತು. ಇದರಿಂದ ಭಯಗೊಂಡ ಗಂಡನ ಮನೆಯವರು ಶೌಚಾಲಯವನ್ನೂ ಬಳಸಲು ಬಿಡಲಿಲ್ಲ. ಮಾತ್ರವಲ್ಲದೆ ನಿದ್ರಿಸಲು ಕೂಡ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪ ಮಾಡಿದ್ದಾರೆ.

ಮದುವೆಯ ಸಂದರ್ಭದಲ್ಲಿ ಗಂಡನ ಮನೆಯವರಿಗೆ 2.5 ಲಕ್ಷ ನಗದು, ಚಿನ್ನ , ಬೈಕ್ ಸೇರಿದಂತೆ 5 ಲಕ್ಷದ ವರದಕ್ಷಿಣೆ ನೀಡಲಾಗಿತ್ತು. ಅದಾದ ನಂತರವೂ ಮತ್ತೆ 5 ಲಕ್ಷ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಯುವತಿ ಅಪಾದಿಸಿದ್ದಾರೆ.

ಈ ಕುರಿತು ಉಮೇರ್ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಕೂಡ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಬರಂಗ್ ಪುರ ಪೊಲೀಸ್ ಎಸ್ ಪಿ ನಿತಿನ್ ಕುಸಲ್ಕಾರ್, ವರದಕ್ಷಿಣೆ ಕಿರುಕುಳದ ಕುರಿತು ದೂರು ದಾಖಲಿಸಲಾಗಿದೆ. ಯುವತಿಯ ಪತಿ ಮತ್ತು ಮಾವನನ್ನು ಬಂಧಿಸಿ ಐಪಿಸಿ ಸೆಕ್ಷನ್ 498(A) , 323, 506 ಮತ್ತು 34 ರಡಿಯಲ್ಲಿ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.

Comments are closed.