
ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್(ಕೋವಿಡ್-19) ಎರಡನೇ ಹಂತದಲ್ಲಿದೆ. ಮೂರನೇ ಹಂತ ತಲುಪಿದರೆ ಕೊರೊನಾ ವೈರಸ್ ತಡೆಯುವುದು ಕಷ್ಟ ಎಂದು ಐಸಿಎಂಆರ್(ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಹಾ ನಿರ್ದೇಶಕ ಡಾ. ಬಲರಾಮ್ ಭಾರ್ಗವ್ ಅವರು ಹೇಳಿದ್ದಾರೆ.
ಐಸಿಎಂಆರ್ ಪ್ರಕಾರ ಇದುವರೆಗೆ ಭಾರತದಲ್ಲಿ 80 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಹಂತದಲ್ಲಿದೆ. ಮುಂದಿನ 30 ದಿನಗಳಲ್ಲಿ ಎಚ್ಚೆತ್ತುಕೊಳ್ಳದೇ ಇದ್ದರೆ 3ನೇ ಹಂತ ತಲುಪಲಿದೆ. ಮೂರನೇ ಸ್ಟೇಜ್ ತಲುಪಿದರೆ ಕೊರೊನಾ ವೈರಸ್ ನಿಯಂತ್ರಣ ಮಾಡುವುದು ಕಷ್ಟ ಎಂದಿದ್ದಾರೆ.
ಕೊರೊನಾ ವೈರಸ್ನ 3ನೇ ಸ್ಟೇಜ್ ಯಾವುದು..?
ವಿಶ್ವದಾದ್ಯಂತ ಕೊರೊನಾ ವೈರಸ್ ಹರಡಿರುವುದು ಮೊದಲನೇ ಹಂತವಾಗಿದೆ. ವಿದೇಶದಿಂದ ಭಾರತಕ್ಕೆ ಬಂದವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು ಎರಡನೇ ಹಂತವಾಗಿದ್ದು, ದೇಶದೊಳಗೆ ಒಬ್ಬರಿಂದ ಒಬ್ಬರಿಗೆ ಕೊರೊನಾ ವೈರಸ್ ಹರಡುವುದು ಮೂರನೇ ಹಂತವಾಗಿದೆ.
ಇಲ್ಲಿವರೆಗೂ ಭಾರತದಲ್ಲಿ ಕೊರೊನಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿಲ್ಲ. ಈ ಸೋಂಕು ಹಬ್ಬುವ ಮೊದಲು ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಕಠಿಣವಾದ ನಿರ್ಧಾರ ತೆಗೆದುಕೊಳ್ಳಬೇಕು. ದೇಶಕ್ಕೆ ಮೂರನೇ ಹಂತ ತಲುಪುವ ಸಾಧ್ಯತೆ ಇದೆ ಹೀಗಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಐಸಿಎಂಆರ್ ಮಹಾ ನಿರ್ದೇಶಕ ಡಾ. ಬಲರಾಮ್ ಭಾರ್ಗವ್ ಅವರು ಎಚ್ಚರಿಕೆ ನೀಡಿದರು.
ಕೊರೊನಾ 4ನೇ ಸ್ಟೇಜ್ ಹೇಗಿರುತ್ತದೆ..?
ಇನ್ನು ಕೊರೊನಾದ ನಾಲ್ಕನೇ ಹಂತವು ಈ ವೈರಸ್ನ್ನ ತಡೆಯುವುದು ಅಸಾಧ್ಯವಾಗಿದೆ. ನಾಲ್ಕನೇ ಸ್ಟೇಜ್ನಲ್ಲಿ ಕೊರೊನಾ ಮಾರಣಹೋಮ ಉಂಟು ಮಾಡುತ್ತದೆ. ಚೀನಾ ಹಾಗೂ ಇಟಲಿಯಲ್ಲಿ ಕೊರೊನಾ ಸೋಂಕು ನಾಲ್ಕನೇ ಸ್ಟೇಜ್ನಲ್ಲಿದೆ. ಅಲ್ಲಿ ನಿತ್ಯ ನೂರಾರು ಜನ ಕೊರೊನಾಗೆ ಜೀವಹಾನಿಯಾಗುತ್ತಿದ್ದಾರೆ ಎಂದು ಡಾ. ಬಲರಾಮ್ ಭಾರ್ಗವ್ ಅವರು ಹೇಳಿದ್ದಾರೆ.
Comments are closed.