ರಾಷ್ಟ್ರೀಯ

60ನೇ ವರ್ಷದಲ್ಲಿ ವಿವಾಹವಾದ ಕಾಂಗ್ರೆಸ್‌ ಹಿರಿಯ ನಾಯಕ!

Pinterest LinkedIn Tumblr


ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಮುಕುಲ್ ವಾಸ್ನಿಕ್ ಅವರು ತಮ್ಮ 60ನೇ ವಯಸ್ಸಿನಲ್ಲಿ ಶನಿವಾರ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಾಂಗ್ರೆಸ್ ನಾಯಕ ವಾಸ್ನಿಕ್ ಅವರು ತಮ್ಮ ಬಹುಕಾಲದ ಸ್ನೇಹಿತೆ ರವೀನಾ ಖುರಾನಾ ಅವರನ್ನು ಶನಿವಾರ ಮದುವೆಯಾಗಿದ್ದಾರೆ. ಇವರ ವಿವಾಹಕ್ಕೆ ಕಾಂಗ್ರೆಸ್ ನ ಹಿರಿಯ ನಾಯಕರಾದ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್, ಕರ್ನಾಟಕ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ಶುಭ ಕೋರಿದ್ದಾರೆ.

ಪಂಚತಾರಾ ಹೋಟೆಲ್ ನಲ್ಲಿ ಮುಕುಲ್ ಹಾಗೂ ಖುರಾನಾ ಅವರು ವಿವಾಹವಾಗಿದ್ದಾರೆ. ಮುಕುಲ್ ಅವರು ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ವಿವಾಹ ಜೀವನಕ್ಕೆ ಮುಕುಲ್‌ ವಾಸ್ನಿಕ್‌ ಅವರ ಆಪ್ತವಲಯದಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವಾ ಮುಕುಲ್‌ ವಾಸ್ನಿಕ್‌ ಮತ್ತು ರವೀನಾ ಖುರಾನಾ ಅವರಿಗೆ ಅಭಿನಂದನೆಗಳು. ಮುಂದಿನ ನಿಮ್ಮ ಬದುಕು ಸಂತೋಷದಿಂದ ಕೂಡಿರಲಿ ಎಂದು ಅಶೋಕ್ ಗೆಹ್ಲೋಟ್ ಅವರು ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ್ದಾರೆ.

Comments are closed.