
ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಪ್ರತಿಭಟನೆ ಈಗಾಗಲೇ ಹಿಂಸಾಚಾರಕ್ಕೆ ತಿರುಗಿದೆ. ಕೋಮುಗಲಭೆಯ ರೂಪ ತಾಳಿರುವ ಪ್ರತಿಭಟನೆಯಲ್ಲಿ 47 ಜನರು ಸಾವನ್ನಪ್ಪಿದ್ದಾರೆ. ದೆಹಲಿ ಹಿಂಸಾಚಾರದ ವೇಳೆ ಪೊಲೀಸರಿಗೆ ಗನ್ ತೋರಿಸಿದ್ದ ಶಾರುಕ್ ಖಾನ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಜಫ್ರಾಬಾದ್ನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರತ್ತ ಗನ್ ತೋರಿಸಿದ್ದ ಯುವಕನ ಫೋಟೋ ವೈರಲ್ ಆಗಿತ್ತು. ಆತನ ಹೆಸರು ಶಾರುಕ್ ಖಾನ್ ಎಂದು ಪತ್ತೆಹಚ್ಚಿದ್ದ ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದರು. ಇಂದು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ 1,300 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 369 ಎಫ್ಐಆರ್ ದಾಖಲಾಗಿದೆ. ಈಶಾನ್ಯ ದೆಹಲಿಯ ಜಫ್ರಾಬಾದ್, ಮುಜಾಪುರ್, ಬಾಬಾರ್ಪುರ್, ಚಾಂದ್ ಬಾಗ್, ಶಿವ ವಿಹಾರ್, ಯಮುನಾ ವಿಹಾರ್ನಲ್ಲಿ ಇನ್ನೂ ಪ್ರತಿಭಟನೆಯ ಬಿಸಿ ತಣ್ಣಗಾಗಿಲ್ಲ. ಈ ಪ್ರದೇಶಗಳ 47 ಜನ ಈಗಾಗಲೇ ಸಾವನ್ನಪ್ಪಿದ್ದಾರೆ. ನೂರಾರು ಜನರ ಸ್ಥಿತಿ ಗಂಭೀರವಾಗಿದೆ.
Comments are closed.