ರಾಷ್ಟ್ರೀಯ

ಹುಡುಗನ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಬಾಲಕಿಯ ಕೂದಲು ಕತ್ತರಿಸಿದ ಪೋಷಕರು

Pinterest LinkedIn Tumblr


ಭೋಪಾಲ್: ಹುಡುಗನ ಜೊತೆ ಫೋನ್ ನಲ್ಲಿ ಮಾತನಾಡಿದ್ದ ಬಾಲಕಿಯ ಕೂದಲು ಕತ್ತರಿಸಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದ ಸೊಂಡವಾ ಪ್ರದೇಶದ ಅಲಿರಾಜಪುರದಲ್ಲಿ ನಡೆದಿದೆ.

ಫೋನ್ ನಲ್ಲಿ ಹುಡುಗರ ಜೊತೆ ಮಾತನಾಡಿದ್ದಾಳೆ ಎಂದು ಶಂಕಿಸಿ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತನಾಡಿದ್ದು ತಪ್ಪು ಎಂದು ಹೇಳಿ ಬಾಲಕಿಯ ಕೂದಲನ್ನು ಕತ್ತರಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್‍ಐಆರ್ ಸಹ ದಾಖಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ಅಪ್ರಾಪ್ತ ಬಾಲಕಿ ಠಾಣೆಗೆ ಬಂದು ಪೋಷಕರು ತನ್ನನ್ನು ದೊಣ್ಣೆಯಿಂದ ಥಳಿಸಿ, ಕೂದಲು ಕತ್ತರಿಸಿದ್ದಾರೆ ಎಂದು ದೂರು ನೀಡಿದ್ದಳು. . ಬಾಲಕಿ ಹುಡುಗರ ಜೊತೆ ಫೋನ್ ನಲ್ಲಿ ಮಾತನಾಡುತ್ತಾಳೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಬಾಲಕಿಯ ಚಿಕ್ಕಪ್ಪ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Comments are closed.