
ಹೊಸದೆಹಲಿ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಹಿನ್ನೆಲೆಯಲ್ಲಿ ಹಲವು ನಗರಗಳ ಚಿತ್ರಣವೇ ಬದಲಾಗಿವೆ. ದೊಡ್ಡಣ್ಣನನ್ನು ಸ್ವಾಗತಿಸಲು ಭಾರತ ಸಜ್ಜಾಗಿದ್ದು ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಟ್ರಂಪ್ ಸಾಗುವ ರಸ್ತೆಗಳು ಕಂಗೊಳಿಸುತ್ತಿದ್ದು , ಏರ್ಪೋರ್ಟ್ಗಳಲ್ಲೂ ಕ್ಲಿನಿಂಗ್ ಮುಂದುವರಿದಿದೆ.
ಫೆಬ್ರವರಿ 24, 25 ರಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ. ಅಮೆರಿಕಾದ ಅಧ್ಯಕ್ಷರು ಹಾಗೂ ಅವರ ಪತ್ನಿ ತಾಜ್ಮಹಲ್ಗೆ ಭೇಟಿ ನೀಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಸಾಗುವ ರಸ್ತೆಯನ್ನು ಸ್ವಚ್ಛಗೊಳಿಸಲಾಗಿದೆ. ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿಕೊಂಡು ಈ ಕೆಲಸವನ್ನು ಮಾಡುತ್ತಿದ್ದಾರೆ.
ರಸ್ತೆಯಲ್ಲಿ ಎಲ್ಲಿಯೂ ಕಸ ಕಡ್ಡಿ ಕಾಣದಂತೆ ನೀರು ಸುರಿದು ಸ್ವಚ್ಛಗೊಳಿಸಲಾಗುತ್ತಿದೆ. ರಸ್ತೆಯುದ್ಧಕ್ಕೂ ತಳಿರುತೋರಣಗಳನ್ನು ಕಟ್ಟಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟರ್ಗಳು ರಾರಾಜಿಸುತ್ತಿವೆ.
ಟ್ರಂಪ್ ಸ್ವಾಗತಿಸಲು ಅಹಮದಾಬಾದ್ ಕೂಡಾ ಸಜ್ಜಾಗಿದ್ದು, ನಗರವನ್ನು ಸಿಂಗರಿಸಲು ಹಾಗೂ ರೋಡ್ ಶೋಗಾಗಿ 100 ರಿಂದ 125 ಕೋಟಿ ಖರ್ಚು ಮಾಡಲಾಗಿದೆ. ಟ್ರಂಪ್ ಸಾಗುವ ರಸ್ತೆಯ ಪಕ್ಕದಲ್ಲಿರುವ ಕೊಳೆಗೇರಿಗೆ ಅಡ್ಡಲಾಗಿ ಗೋಡೆ ಕಟ್ಟಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ.
Comments are closed.