ರಾಷ್ಟ್ರೀಯ

ತಾಯಿ ಮನೆಗೆ ಹೋಗಲು ಬಿಡದ ಗಂಡನ ಮರ್ಮಾಂಗ ಕತ್ತರಿಸಿದ ಪತ್ನಿ

Pinterest LinkedIn Tumblr

ರಾಂಚಿ: ತವರು ಮನೆಗೆ ಹೋಗಲು ಬಿಡಲಿಲ್ಲ ಎಂದು ಪತ್ನಿಯೊಬ್ಬಳು ತನ್ನ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಜಾರ್ಖಂಡ್‍ನ ಗಿರಿಹಿಡ್ ಜಿಲ್ಲೆಯಲ್ಲಿ ನಡೆದಿದೆ.

ಪತ್ನಿ ತಾನು ತನ್ನ ತವರು ಮನೆಗೆ ಹೋಗುತ್ತೇನೆ ಎಂದು ಹಠ ಮಾಡುತ್ತಿದ್ದಳು. ಆದರೆ ಪತಿ ಆಕೆಗೆ ಅನುಮತಿ ನೀಡಲಿಲ್ಲ. ಇದರಿಂದ ಕೋಪಗೊಂಡ ಪತ್ನಿ ಬ್ಲೇಡ್‍ನಿಂದ ಆತನ ಮರ್ಮಾಂಗದ ಮೇಲೆ ಹಲ್ಲೆ ನಡೆಸಿದ್ದಾಳೆ.

ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಆತನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಸದ್ಯ ಪತಿಯ ಆರೋಗ್ಯದ ಬಗ್ಗೆ ವೈದ್ಯರು ಪ್ರತಿಕ್ರಿಯಿಸಿ, ಮಹಿಳೆ ತನ್ನ ಪತಿಯ ಮರ್ಮಾಂಗವನ್ನು ಶೇ. 60ರಷ್ಟು ಕತ್ತರಿಸಿದ್ದಾಳೆ ಎಂದು ಹೇಳಿದ್ದಾರೆ.

ಎರಡು ದಿನದ ಹಿಂದೆ ನನ್ನ ಪತ್ನಿ ತನ್ನ ತವರು ಮನೆಯಿಂದ ಹಿಂತಿರುಗಿದ್ದಳು. ಆದರೆ ಈಗ ಮತ್ತೆ ಹೋಗುತ್ತೇನೆ ಎಂದು ಹಠ ಮಾಡುತ್ತಿದ್ದಳು. ಈ ವಿಷಯಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಆಕೆ ನನ್ನ ಖಾಸಗಿ ಅಂಗದ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಪತಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾನೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪತ್ನಿ, ನಾನು ಪರೀಕ್ಷೆ ಬರೆಯಬೇಕಿತ್ತು. ಹಾಗಾಗಿ ನಾನು ನನ್ನ ತವರು ಮನೆಗೆ ಹೋಗುತ್ತೇನೆ ಎಂದು ಹಠ ಮಾಡಿದ್ದೆ. ಆದರೆ ನನ್ನ ಪತಿ ನಿರಾಕರಿಸಿದ ಬಳಿಕ ನಾನು ಇಲ್ಲಿಯೇ ಇದ್ದೆ ಎಂದು ಹೇಳಿದ್ದಾಳೆ.

ಈ ಬಗ್ಗೆ ಮಾತನಾಡಿದ ಬಾಗೋದರ್ ಪೊಲೀಸ್ ಠಾಣೆಯ ಉಸ್ತುವಾರಿ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರಣೆ ವೇಳೆ ಪತ್ನಿ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ ಎಂದು ಪತಿ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದ ಬಗ್ಗೆ ಮಹಿಳೆಯನ್ನು ಕೂಡ ವಿಚಾರಣೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

Comments are closed.