ರಾಷ್ಟ್ರೀಯ

ಮಾಂಸಾಹಾರಿಗಳನ್ನು ಶಿಕ್ಷಿಸಲು ಬಂದಿರುವ ‘ರೌದ್ರವತಾರವೇ ಕೊರೋನಾ ವೈರಸ್ -ಹಿಂದೂ ಮಹಾಸಭಾ

Pinterest LinkedIn Tumblr


ನವದೆಹಲಿ: ವಿಶ್ವದಾದ್ಯಂತ ಭೀತಿಯನ್ನು ಸೃಷ್ಟಿಸಿರುವ ಮಾರಣಾಂತಿಕ ಸಾಂಕ್ರಾಮಿಕ ರೋಗ ಕೊರೋನಾ ವೈರಸ್ ಗೆ ಮದ್ದು ಕಂಡುಹಿಡಿಯಲು ವಿಜ್ಞಾನಿ ಸಮುದಾಯ ತಲೆಕೆಡಿಸಿಕೊಂಡಿದ್ದರೆ ಇತ್ತ ಹಿಂದೂ ಮಹಾಸಭಾ ಮಾಂಸಾಹಾರಿಗಳನ್ನು ಶಿಕ್ಷಿಸಲು ಬಂದಿರುವ ರೌದ್ರವತಾರ ಎನ್ನುತ್ತಿದೆ.

ಕೊರೋನಾ ಇದು ವೈರಸ್ ಅಲ್ಲ, ಆದರೆ, ಕೀಳು ಅಭಿರುಚಿಯನ್ನು ತಡೆಯಲು ಬಂದಿರುವ ಅವತಾರ. ಮಾಂಸಾಹಾರಿಗಳನ್ನು ಶಿಕ್ಷಿಸಲು ಹಾಗೂ ಮರಣದ ಸಂದೇಶ ನೀಡಲು ಬಂದಿರುವ ಅವತಾರ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ನಂಬಿದರೆ ನಂಬಿ, ಬಿಟ್ರೆ ಬಿಡಿ, ನರಸಿಂಹ ರಾಕ್ಷಸನನ್ನು ಕೊಲಲ್ಲು ಅವತಾರ ಎತ್ತಿದ್ದಂತೆ ಚೀನಾದವರು ಪ್ರಾಣಿ ಹಿಂಸೆ ಮಾಡದೆ ಸಸ್ಯಾಹಾರಿಗಳಾಗಿ ಬದಲಾಗಲು ಇದೊಂದು ಪಾಠವಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ಆರೋಗ್ಯಕರ ಸಾಂಕ್ರಾಮಿಕ ರೋಗದಿಂದ ಹೊರಬರಲು ಚೀನಾದವರಿಗೆ ಒಂದು ಪರ್ಯಾಯ ಮಾರ್ಗವನ್ನು ಅವರು ತಿಳಿಸಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಕೊರೋನಾ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎಲ್ಲಾ ಮಾಂಸಾಹಾರಿಗಳು ಮುಂದೆ ಈ ಅಮಾಯಕ ಪ್ರಾಣಿಗಳನ್ನು ಕೊಲ್ಲುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ತಪ್ಪಾಯಿತು ಎಂದು ಬೇಡಿಕೊಂಡರೆ ಕೊರೋನಾದ ಕೋಪ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಆದಾಗ್ಯೂ, ಭಾರತೀಯರು ಈ ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ಭಯಪಡಬೇಕಾಗಿಲ್ಲ. ದೇವರನ್ನು ಪೂಜಿಸುವ ಹಾಗೂ ಗೋ ರಕ್ಷಣೆಯಲ್ಲಿ ನಂಬಿಕೆ ಹೊಂದಿರುವ ಭಾರತೀಯರಲ್ಲಿ ಕೊರೋನಾ ವೈರಸ್ ನಿಂದ ಪ್ರತಿ ರಕ್ಷಣೆ ಪಡೆಯುವ ಶಕ್ತಿ ಹೆಚ್ಚಿದೆ ಎಂದು ಹಿಂದೂ ಮಹಾಸಭಾ ಮುಖ್ಯಸ್ಥರು ಧೈರ್ಯ ನೀಡಿದ್ದಾರೆ.

Comments are closed.