ರಾಷ್ಟ್ರೀಯ

ಪ್ರೀತಿಗೆ ವಿರೋಧ; ಮಹಿಳಾ ಪೊಲೀಸ್ ಹತ್ಯೆಗೈದ ಅಪ್ರಾಪ್ತ ಮಗಳು!

Pinterest LinkedIn Tumblr


ನವದೆಹಲಿ: ದೆಹಲಿಯ ಮಹಿಳಾ ಹೆಡ್ ಕಾನ್ಸ್ ಟೇಬಲ್ ಅವರನ್ನು ಉತ್ತರಪ್ರದೇಶದ ಗಾಜಿಯಾಬಾದ್ ಮನೆಯಲ್ಲಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದ್ದು,ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ಮಗಳು ಮತ್ತು ಆಕೆಯ ಪ್ರಿಯಕರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಶಶಿ ಶುಕ್ಲಾ ಎಂಬ ಹೆಡ್ ಕಾನ್ಸ್ ಟೇಬಲ್ ದೆಹಲಿಯ ಬ್ರಿಜಿ ವಿಹಾರ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಪ್ರಕರಣದಲ್ಲಿ ಮಗಳು ಶಾಮೀಲಾಗಿರುವುದು ತಿಳಿದು ಬಂದಿತ್ತು ಎಂದು ವರದಿ ವಿವರಿಸಿದೆ.

ಪ್ರಿಯಕರನ ವಿಚಾರದಲ್ಲಿ ತಾಯಿ ಮಧ್ಯಪ್ರವೇಶಿಸಿರುವುದು ಮಗಳಿಗೆ ಅಸಮಾಧಾನ ತಂದಿದ್ದು, ಈ ಕಾರಣಕ್ಕಾಗಿಯೇ ತಾಯಿಯನ್ನು ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಮಗಳು ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Comments are closed.