ರಾಷ್ಟ್ರೀಯ

ಪುಲ್ವಾಮ ದಾಳಿಗೆ ಒಂದು ವರ್ಷ: ಹುತಾತ್ಮ ಯೋಧರ ಸ್ಮರಣಾರ್ಥ ಸ್ಮಾರಕ ಸ್ತಂಭ ಉದ್ಘಾಟನೆ

Pinterest LinkedIn Tumblr


ಶ್ರೀನಗರ: ಪುಲ್ವಾಮದಲ್ಲಿ 2019 ಫೆ .14ರಂದು ನಡೆದಿದ್ದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಸ್ಮಾರಕ ಸ್ತಂಭ ಸಮರ್ಪಣೆ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆ ಗೌರವ ಸಲ್ಲಿಸಲಿದೆ.

ಪುಲ್ವಾಮದ ಲೆಟ್ ಪೋರಾ ಎಂಬಲ್ಲಿರುವ ಸಿಆರ್ ಪಿ ಎಫ್ ತರಭೇತಿ ಕೇಂದ್ರದಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ಸಿಆರ್ ಪಿ ಎಫ್ ವಿಶೇಷ ಮಹಾ ನಿರ್ದೇಶಕಜೂಲ್ಫಿಕರ್ ಹಸನ್, ಕಾಶ್ಮೀರ ವಲಯದ ಪೊಲೀಸ್ ಮಹಾ ನಿರ್ದೇಶಕ ರಾಜೇಶ್ ಕುಮಾರ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸ್ತಂಭದ ಮೇಲೆ ಸೇವೆ ಮತ್ತು ನಿಷ್ಟೆ ಎಂಬ ಧ್ಯೇಯದೊಂದಿಗೆ ಹುತಾತ್ಮ ಯೋಧರ ಹೆಸರುಗಳನ್ನು ಬರೆಯಲಾಗಿದೆ. ಇದೇ ಸಮಾರಂಭದಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ ಎಂದು ಜೂಲ್ಫಿಕರ್ ಹಸನ್ ತಿಳಿಸಿದ್ದಾರೆ

2019ರ ಫೇ. 14ರಂದು ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರಿದ್ದ ಬಸ್ ಮೇಲೆ ಜೈಷ್ ಏ ಮೊಹಮ್ಮದ್ ಉಗ್ರ ಸಂಘಟನೆ ಬಾಂಬ್ ದಾಳಿ ನಡೆಸಿತ್ತು. ಪರಿಣಾಮವಾಗಿ 40 ಯೋಧರು ಹುತಾತ್ಮರಾಗಿದ್ದರು.

Comments are closed.