
ಮಹಾರಾಷ್ಟ್ರ(ಫೆ.12): ಯುವತಿ ಕೆಳಜಾತಿ ಯುವಕನನ್ನು ಪ್ರೀತಿಸಿ ಓಡಿ ಹೋಗಿ ಮದುವೆಯಾದ ಸುದ್ದಿ ಕೇಳಿ ಆಕೆಯ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದಿದೆ. ಮಗಳು ಅಂತರ್ಜಾತಿ ವಿವಾಹವಾದಳೆಂದು ಅವಮಾನ ತಾಳಲಾರದೆ ಯುವತಿಯ ಪೋಷಕರು ಹಾಗೂ ಆಕೆಯ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಪೋಷಕರ ಸಾವಿನ ಸುದ್ದಿ ಕೇಳಿದ ನವ ದಂಪತಿ ಕೂಡ ಪ್ರಾಣ ಬಿಡಲು ನದಿಗೆ ಹಾರಿದ್ದರು. ಈ ವೇಳೆ ಪೊಲೀಸರಿಗೆ ವಿಷಯ ತಿಳಿದು ಇಬ್ಬರನ್ನೂ ರಕ್ಷಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ಸ್ಥಿರವಾಗಿದೆ. ಕಳೆದ ಶನಿವಾರ ಯುವತಿ ಪ್ರಣಾಲಿ ವಾರ್ಗಂತಿವರ್(24) ಮನೆಯಲ್ಲಿ ಯಾರಿಗೂ ಹೇಳದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಅಲ್ಲಿಂದ ನೇರವಾಗಿ ಮಾರ್ಕಂಡ ಹಳ್ಳಿಗೆ ತೆರಳಿದ್ದ ಪ್ರಣಾಲಿ, ತಾನು ಪ್ರೀತಿಸುತ್ತಿದ್ದ ಯುವಕನನ್ನು ಭಾನುವಾರ ಶಿವನ ದೇವಾಸ್ಥಾನವೊಂದರಲ್ಲಿ ಮದುವೆಯಾಗಿದ್ದಳು.
ಶಾಲಾ ಶಿಕ್ಷಕಿಯಾಗಿರುವ ಯುವತಿ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ್ದಾಳೆ. ಖಾಸಗಿ ಕಂಪನಿಯೊಂದಲ್ಲಿ ಕೆಲಸ ಮಾಡುತ್ತಿರುವ ಯುವಕ ಪರಿಶಿಷ್ಟ ಜಾತಿಯವನಾಗಿದ್ದಾನೆ. ಹೀಗಾಗಿ ಇವರ ಪ್ರೀತಿಗೆ ಯುವತಿ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.ಮನೆಯವರ ವಿರೋಧದ ನಡುವೆಯೂ ಯುವತಿ ಕೆಳಜಾತಿಯ ಯುವಕನನ್ನು ಮದುವೆಯಾಗಿದ್ದಳು.
ವಿಷಯ ತಿಳಿದ ಆಕೆಯ ಪೋಷಕರು ಅವಮಾನ ಎಂದು ಭಾವಿಸಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಣಾಲಿ ತಂದೆ ರವೀಂದ್ರ(52), ತಾಯಿ ವೈಶಾಲಿ(45) ಮತ್ತು ಆಕೆಯ ಸಹೋದರ ಸಾಯಿರಾಮ್ ಮೃತಪಟ್ಟವರು. ಇವರು ಮೊದಲು ಊಟ ಬಿಟ್ಟು, ಬಳಿಕ ಮನೆಯಿಂದ ಹೊರಟಿದ್ದಾರೆ. ಹಸಿವಿನಿಂದಲೇ ಕಿಲೋಮೀಟರ್ಗಟ್ಟಲೇ ನಡೆದುಕೊಂಡು ಹೋಗಿದ್ದಾರೆ. ನಂತರ ಹೊಲವೊಂದರಲ್ಲಿ ಇದ್ದ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಗೆಲುವಿನ ಸಂಭ್ರಮದಲ್ಲಿದ್ದ ಆಪ್ ಶಾಸಕನ ಕಾರಿನ ಮೇಲೆ ಗುಂಡಿನ ದಾಳಿ; ಕಾರ್ಯಕರ್ತ ಸಾವುಮೂರು ಜನರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದ ಯುವಕ-ಯುವತಿ ತಾವು ಕೂಡ ಸಾಯುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಮೊದಲು ಕೆಮಿಕಲ್ಸ್ ಸೇವಿಸಿ, ಬಳಿಕ ನದಿಗೆ ಹಾರಿದ್ದಾರೆ. ಆದರೆ ವಿಷಯ ತಿಳಿದ ಪೊಲೀಸರ ತಂಡ ಅವರನ್ನು ರಕ್ಷಿಸಿದ್ದಾರೆ. ಮದುವೆಯಾದ ಯುವಕ-ಯುವತಿ ಇಬ್ಬರೂ ಸಹ ವಯಸ್ಕರಾಗಿದ್ದಾರೆ.
Comments are closed.