ರಾಷ್ಟ್ರೀಯ

ನಿವೃತ್ತ ಯೋಧನನ್ನೇ ಗುಂಡು ಹಾರಿಸಿ ಹತ್ಯೆ ಮಾಡಿದ ಮಗಳು

Pinterest LinkedIn Tumblr


ಮಥುರಾ: ಜಗಳದ ವೇಳೆ ತಮ್ಮ ಕುಟುಂಬದ ಸದಸ್ಯರತ್ತ ಗುಂಡು ಹಾರಿಸಲಾರಂಭಿಸಿದ್ದ ಚೇತ್ರಾಂ (45) ಎಂಬ ನಿವೃತ್ತ ಯೋಧರೊಬ್ಬರನ್ನು ಅವರ ಪುತ್ರಿಯೇ ಗುಂಡು ಹಾರಿಸಿ ಕೊಂದಿರುವ ಘಟನೆ ಮಥುರಾ ಜಿಲ್ಲೆಯ ಮಿಥೌಲಿ ಎಂಬ ಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ರಾತ್ರಿ ಸುಮಾರು 11 ಗಂಟೆಗೆ ತಮ್ಮ ಪತ್ನಿ ರಾಜಕುಮಾರಿ (38) ಜೊತೆಗೆ ಜಗಳವಾಡಿದ್ದ ಚೇತ್ರಾಂ, ಮೊದಲು ಪತ್ನಿಗೆ ಗುಂಡು ಹಾರಿಸಿದ್ದಾರೆ. ಆನಂತರ ಪುತ್ರಿ ಅಲ್ಕಾ (19) ಮೇಲೂ ಗುಂಡು ಹಾರಿಸಿ, ಆನಂತರ ತಮ್ಮ ಪುತ್ರನ ಮೇಲೆ ಗುಂಡು ಹಾರಿಸಲು ಸಜ್ಜಾದಾಗ, ತಕ್ಷಣವೇ ಅಲ್ಕಾ ಅವರು ತಂದೆಯಿಂದಲೇ ಪಿಸ್ತೂಲ್‌ ಕಿತ್ತುಕೊಂಡು, ಅವರಿಗೇ ಗುಂಡು ಹಾರಿಸಿದ್ದಾರೆ.

ನೆಲಕ್ಕುರುಳಿದ ಚೇತ್ರಾ ಅಲ್ಲೇ ಮೃತಪಟ್ಟಿದ್ದಾರೆ. ರಾಜಕುಮಾರಿ, ಅಲ್ಕಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Comments are closed.