ರಾಷ್ಟ್ರೀಯ

ದೇವಸ್ಥಾನದಲ್ಲಿ ರಹಸ್ಯ ಮದುವೆ, ಹೋಟೆಲ್‍ನಲ್ಲಿ ಫಸ್ಟ್‌ನೈಟ್‌: ಮದುವೆಯಾಗಿ ಮಕ್ಕಳಿದ್ದರೂ ಯುವತಿ ಜೊತೆ ಲವ್

Pinterest LinkedIn Tumblr


ಗಾಂಧಿನಗರ: ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಮೋಸ ಮಾಡಿದ್ದಕ್ಕೆ ಉದ್ಯಮಿಯನ್ನು ಗುಜರಾತ್‍ನ ವಡೋದರಾ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಫತೇಹ್‍ನಗರದ ಪ್ರೇಮ್‍ನಗರ ಯುವತಿ ಕಾಲೇಜಿನಲ್ಲಿ ಓದುತ್ತಿದ್ದಳು. ಈಕೆಗೆ ಸ್ನೇಹಿತರಿಂದ ಬೀಜ ಮಾರಾಟ ಮಾಡುವ ವ್ಯಾಪಾರಿಯ ಪರಿಚಯವಾಗಿತ್ತು. ಆಗ ಉದ್ಯಮಿ ಯುವತಿಯ ಫೋನ್ ನಂಬರ್ ತೆಗೆದುಕೊಂಡಿದ್ದನು. ಅಂದಿನಿಂದ ಇಬ್ಬರು ಚಾಟಿಂಗ್ ಮಾಡಲು ಶುರು ಮಾಡಿದ್ದಾರೆ.

ಒಂದು ದಿನ ಉದ್ಯಮಿ ಯುವತಿಗೆ ಪ್ರಪೋಸ್ ಮಾಡಿ ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಯುವತಿ ಕೂಡ ಆತ ಶ್ರೀಮಂತನಾದ ಕಾರಣ ಪ್ರಪೋಸಲ್ ಒಪ್ಪಿಕೊಂಡಿದ್ದು, ಮೇ 1, 2017 ರಂದು ಇಬ್ಬರು ಪ್ರೇಮ್‍ನಗರದ ದೇವಸ್ಥಾನವೊಂದರಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು. ವಿವಾಹವಾದ ಮರುದಿನ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿ ಫಸ್ಟ್‌ನೈಟ್‌ ಕೂಡ ಮಾಡಿಕೊಂಡಿದ್ದಾರೆ. ಆದರೆ ಮೊದಲ ರಾತ್ರಿಯ ಬಳಿಕ ಉದ್ಯಮಿಯ ರಹಸ್ಯ ಬಯಲಾಗಿದೆ.

ಯುವತಿಗೆ ತಿಳಿಯದೆ ಫಸ್ಟ್‌ನೈಟ್‌ ರೂಮಿನಲ್ಲಿ ಉದ್ಯಮಿ ರಹಸ್ಯ ಕ್ಯಾಮೆರಾಗಳನ್ನು ಫಿಕ್ಸ್ ಮಾಡಿ ರೆಕಾರ್ಡ್ ಮಾಡಿಕೊಂಡಿದ್ದನು. ಮರುದಿನ ಪತ್ನಿಗೆ ತನ್ನ ತವರು ಮನೆಗೆ ಹೋಗುವಂತೆ ಹೇಳಿದ್ದಾನೆ. ಇದನ್ನು ಕೇಳಿದ ತಕ್ಷಣ ಯುವತಿ ಶಾಕ್ ಆಗಿದ್ದಾಳೆ. ನಮ್ಮ ಮನೆಯ ಹಿರಿಯರು ಈ ಮದುವೆಯನ್ನು ಒಪ್ಪುವುದಿಲ್ಲ. ಸ್ವಲ್ಪ ದಿನಗಳ ನಂತರ ನಾನೇ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಆಕೆಯನ್ನು ಕಳುಹಿಸಿದ್ದಾನೆ. ಅಂದಿನಿಂದ ಉದ್ಯಮಿ ಆಕೆಗೆ ಸಿಗದಂತೆ ತಪ್ಪಿಸಿಕೊಂಡು ಓಡಾಡಲು ಆರಂಭಿಸಿದ್ದ.

ಇತ್ತ ಯುವತಿ ಗರ್ಭಿಣಿಯಾದ ಕಾರಣ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಾಯ ಮಾಡಿದ್ದಳು. ಆದರೆ ಈ ವೇಳೆ ಪತಿಗೆ ಈಗಾಗಲೇ ಮದುವೆಯಾಗಿ, ಮಕ್ಕಳಿದ್ದಾರೆ ಎಂಬ ಸುದ್ದಿ ತಿಳಿದು ಯುವತಿ ಶಾಕ್ ಆಗಿದ್ದಳು. ನಂತರ ಸ್ನೇಹಿತರ ಸಹಾಯದಿಂದ ತನ್ನ ಪತಿಯನ್ನು ಹುಡುಕಿದ ಆಕೆ, ತನಗೆ ಏಕೆ ಅನ್ಯಾಯ ಮಾಡಿದೆ. ನಿನ್ನಿಂದ ನಾನು ಗರ್ಭಿಣಿಯಾಗಿದ್ದೇನೆ. ನನಗೆ ನ್ಯಾಯ ಬೇಕು ಎಂದು ಪ್ರಶ್ನೆ ಮಾಡಿ ಆಗ್ರಹಿಸಿದ್ದಳು.

ಯುವತಿ ಮೋಸ ಹೋಗಿರುವುದು ಬಯಲಿಗೆ ಬರುತ್ತಿದಂತೆ ಉದ್ಯಮಿ ಮತ್ತೊಂದು ಹೊಸ ಡ್ರಾಮಾ ಶುರು ಮಾಡಿದ್ದನು. ತನ್ನನ್ನು ಕ್ಷಮಿಸುವಂತೆ ಆಕೆಯ ಬಳಿ ಬೇಡಿಕೊಂಡಿದ್ದನು. ಅಲ್ಲದೇ ಯುವತಿ ಊಟ ಮಾಡುವ ಆಹಾರದಲ್ಲಿ ಔಷಧಿ ಮಿಕ್ಸ್ ಮಾಡಿ ಗರ್ಭಪಾತ ಆಗುವಂತೆ ಮಾಡಿದ್ದನು. ಆ ಬಳಿಕ ತನಗೆ 15 ಲಕ್ಷ ರೂ. ನೀಡಿದರೆ ಮಾತ್ರ ಮದುವೆಯಾಗುತ್ತೇನೆ ಇಲ್ಲದಿದ್ದರೆ ನಿನ್ನ ದಾರಿ ನೀನು ನೋಡಿಕೋ ಎಂದು ಬೆದರಿಕೆ ಹಾಕಿದ್ದ. ಇದರಿಂದ ನೊಂದ ಯುವತಿ ಇಜತ್‍ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿ ವಿರುದ್ಧ ದೂರು ದಾಖಲಿಸಿದ್ದಾಳೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

Comments are closed.