ರಾಷ್ಟ್ರೀಯ

ಲಾಟರಿಯಲ್ಲಿ 1 ವರ್ಷದ ಮಗು ಗೆದ್ದಿದ್ದು 7 ಕೋಟಿ ರೂ.!

Pinterest LinkedIn Tumblr

ನವದೆಹಲಿ: ಕೇರಳ ಮೂಲದ 1 ವರ್ಷದ ಪುಟಾಣಿ ಬಾಲಕ 7 ಕೋಟಿ ರೂ.ಗಳ ಲಾಟರಿ ಗೆದ್ದ ಆಶ್ಚರ್ಯಕಾರಿ ಘಟನೆ ಅರಬ್ ಸಂಯುಕ್ತ ಸಂಸ್ಥಾನದಲ್ಲಿ(ಯುಎಇ)ಯಲ್ಲಿ ನಡೆದಿದೆ.

ರಮೀಸ್ ರಹಮನ್ ಎಂಬ ವ್ಯಕ್ತಿ ತನ್ನ ಒಂದು ವರ್ಷದ ಮಗ ಮಹಮ್ಮದ್ ಸಲಾಸ್’ನ ಹೆಸರಲ್ಲಿ ಲಾಟರಿಯೊಂದನ್ನು ಖರೀದಿಸಿದ್ದು ಬರೋಬ್ಬರಿ 1ಮಿಲಿಯನ್ ಯುಎಸ್ ಡಿ( 7 ಕೋಟಿ ರೂ) ಬಹುಮಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

31 ವರ್ಷದ ರಮೀಸ್ ಅಬುಧಾಬಿಯ ಖಾಸಗಿ ಕಂಪೆನಿಯೊಂದರಲ್ಲಿ ಆಕೌಂಟೆಂಟ್ ಆಗಿ ಕೆಲಸಮಾಡುತ್ತಿದ್ದು, ಮಗನ ಹೆಸರಲ್ಲಿ 1319 ನಂಬರಿನ ಲಾಟರಿ ಖರೀದಿಸಿದ್ದರು. ಕಳೆದ ಮಂಗಳವಾರದಂದು ಲಾಟರಿ ಡ್ರಾ ಕೂಡ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ರಮೀಸ್ ಫೆಬ್ರವರಿ 13 ಕ್ಕೆ ಮಗುವಿಗೆ ಒಂದು ವರ್ಷ ತುಂಬುತ್ತದೆ. ಲಾಟರಿ ಹಣ ಸಿಕ್ಕಿರುವುದು ನನ್ನ ಮಗನ ಭವಿಷ್ಯದ ದೃಷ್ಟಿಯಲ್ಲಿ ಬಹಳ ಉಪಯುಕ್ತವಾಯಿತು ಎಂದು ತಿಳಿಸಿದ್ದಾರೆ.

ಈ ಹಿಂದೆ ಕೂಡ ಹಲವು ಭಾರತೀಯರು ಯುಎಇ ಯ ಲಕ್ಕಿ ಡ್ರಾ ವಿಜೇತರಾಗಿದ್ದರು. ಕಳೆದ ಬಾರಿ ದುಬೈ ಗೆ ಕೆಲಸ ಹುಡುಕಿಕೊಂಡು ತೆರಳಿದ್ದ ಭಾರತೀಯ ರೈತನಿಗೆ ಯಾವುದೇ ಕೆಲಸ ಸಿಗದೆ ನಿರಾಶರಾಗಿದ್ದರು. ಭಾರತಕ್ಕೆ ಹಿಂದಿರುಗುವ ವೇಳೆ ಲಾಟರಿಯೊಂದನ್ನು ಖರೀದಿಸಿದಾಗ 4 ಕೋಟಿ ರೂ. ಸಿಕ್ಕು ಜೀವನದ ದಿಶೆಯೇ ಬದಲಾಗಿತ್ತು.

Comments are closed.