ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಕಾಯ್ದೆ ದೇಶದಲ್ಲಿ ಮುಸ್ಲಿಮರ ಜೀವನ ಕಷ್ಟಕರ: ಮಾಯಾವತಿ

Pinterest LinkedIn Tumblr


ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ ಸಿ)ಯಿಂದಾಗಿ ದೇಶದಲ್ಲಿ ಮುಸ್ಲಿಮರ ಜೀವನ ಕಷ್ಟಕರವಾಗಿದೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ಟೀಕಿಸಿದ್ದಾರೆ.

ದೆಹಲಿಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮಾಯಾವತಿ, ಕಾಂಗ್ರೆಸ್, ಬಿಜೆಪಿ ಮತ್ತು ಎಎಪಿಯ “ಆಕರ್ಷಿಸುವ ಪ್ರಣಾಳಿಕೆ”ಯ ಆಮಿಷಕ್ಕೆ ಒಳಗಾಗಬೇಡಿ ಎಂದು ರಾಷ್ಟ್ರ ರಾಜಧಾನಿ ಮತಾದರರಿಗೆ ಕರೆ ನೀಡಿದರು.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ, ಸರ್ವ ಜನ ಹಿತಾಯ, ಸರ್ವಜನ ಸುಖಾಯ’ ಎಂಬ ತತ್ವದಡಿ ಅಭಿವೃದ್ಧಿ ಮಾಡಲಾಗುವುದು ಎಂದು ಮಾಯಾವತಿ ಹೇಳಿದ್ದಾರೆ.

ಸಿಎಎ ಮತ್ತು ಎನ್ ಆರ್ ಸಿ ವಿವಾದತ ನಂತರ ದೇಶದಲ್ಲಿ ಮುಸ್ಲಿಮರ ಜೀವನ ಮತ್ತಷ್ಟು ಕಷ್ಟಕರವಾಗಿದೆ ಎಂದು ಮಾಯಾವತಿ ಆರೋಪಿಸಿದರು.

Comments are closed.