ರಾಷ್ಟ್ರೀಯ

ಕೊಳೆತ ಹೆಂಡತಿಯ ಶವದ ಜೊತೆಗೆ ಮೂರು ದಿನ ಕಳೆದ!

Pinterest LinkedIn Tumblr


ಕೋಲ್ಕತ್ತಾ: ಪತ್ನಿಯ ಕೊಳೆತ ಶವದ ಜೊತೆಗೆ ಪತಿಯು ಮೂರು ದಿನ ಕಳೆದ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ವರದಿಯಾಗಿದೆ. ಶುಕ್ರವಾರ ಈ ಘಟನೆ ಬೆಳಕಿಗೆ ಬಂದಿದ್ದು, ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಾಡಿಯಾ ಜಿಲ್ಲೆಯ ಚಕ್ಢ್ ನಲ್ಲಿ ಈ ಘಟನೆ ನಡೆದಿದೆ. ಭಾರತಿ ಚಂದ ಎಂಬ ಮಧ್ಯ ವಯಸ್ಕ ಮಹಿಳೆ ಸಾವನ್ನಪ್ಪಿದವರು. ಆಕೆ ಲಿವರ್ ಸಂಬಂಧಿತ ಆರೊಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಪತ್ತೆಯಾದ ಶವ ಕೊಳೆತು ಹೋಗಿದ್ದು, ಮಹಿಳೆ ಮೃತಪಟ್ಟು ಹಲವು ದಿನಗಳೇ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟ ಭಾರತಿ ಅವರನ್ನು ಕಳೆದ ಸೋಮವಾರ ಕಡೆಯದಾಗಿ ನೋಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕೆಲ ದಿನಗಳ ಕಾಲ ಮನೆಯಿಂದ ಯಾರೂ ಹೊರಬರದ ಕಾರಣ ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.

Comments are closed.