ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಬಿಜೆಪಿ ಶಾಸಕ

Pinterest LinkedIn Tumblr


ಭೋಪಾಲ್: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿದೆ. ಈ ಪ್ರತಿಭಟನೆಗಳಿಗೆ ವಿರುದ್ಧವಾಗಿ ಬಿಜೆಪಿಯೂ ಸಮಾವೇಶಗಳನ್ನು ಮಾಡುತ್ತಿದೆ. ಆದರೆ ಮಧ್ಯಪ್ರದೇಶದ ಬಿಜೆಪಿಯ ಶಾಸಕರೊಬ್ಬರು ಸಿಎಎಗೆ ವಿರೋಧ ಮಾಡುತ್ತಿದ್ದಾರೆ.

ಬಿಜೆಪಿ ಶಾಸಕ ನಾರಾಯಣ ತ್ರಿಪಾಠಿ ಸ್ವಪಕ್ಷದ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ.

ದೇಶದ ಬೀದಿ ಬೀದಿಗಳಲ್ಲಿ ಆಂತರಿಕ ಯುದ್ದ ನಡೆಯುತ್ತಿದೆ. ಆದರೆ ಇದು ದೇಶಕ್ಕೆ ಮಾರಕ. ಇಂತಹ ಆಂತರಿಕ ಯುದ್ಧಗಳ ಸಮಯದಲ್ಲಿ ನಾವು ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ನಾರಾಯಣ ತ್ರಿಪಾಠಿ ಅಭಿಪ್ರಾಯ ಪಟ್ಟಿದ್ದಾರೆ.

ನಾವು ದೇಶದ ಸಂವಿಧಾನದ ಪ್ರಕಾರ ದೇಶ ನಡೆಸಬೇಕು. ಇಲ್ಲವಾದರೆ ಬಿಜೆಪಿ ಹೊಸ ಸಂವಿಧಾನ ತರಲಿ, ಎಲ್ಲರಿಗೂ ಸಮಾನತೆ ನೀಡುವ ಅಂಬೇಡ್ಕರ್ ಅವರ ಸಂವಿಧಾನವನ್ನು ಹರಿದು ಬಿಸಾಕಲಿ. ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಸಾಧ್ಯವಿಲ್ಲ ಎಂದು ನಾರಾಯಣ ತ್ರಿಪಾಠಿ ಸ್ವಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

Comments are closed.