ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ ಬಳಿಕ ವಲಸಿಗರು ಬಾಂಗ್ಲಾಗೆ

Pinterest LinkedIn Tumblr


ಕೋಲ್ಕತಾ: ಅಕ್ರಮವಾಗಿ ಒಳ ನುಸುಳಿದ್ದ ಬಾಂಗ್ಲಾದೇಶಿಗರು ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ ಬಳಿಕ ಮತ್ತೆ ಸ್ವದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಪಸಾಗುತ್ತಿದ್ದಾರೆ ಎಂದು ಬಿಎಸ್‌ಎಫ್ ಹೇಳಿದೆ.

ಒಂದು ತಿಂಗಳ ಅವಧಿಯಲ್ಲಿ 24 ಉತ್ತರ ಪರಗಣ ಜಿಲ್ಲೆಯ ಮೂಲಕ ಸ್ವದೇಶಕ್ಕೆ ತೆರಳುತ್ತಿದ್ದಾರೆ ಎಂದು ಬಿಎಸ್‌ಎಫ್ನ ದಕ್ಷಿಣ ಬಂಗಾಲ ವಿಭಾಗದ ಇನ್‌ಸ್ಪೆಕ್ಟರ್‌ ಜನರಲ್‌ ವೈ.ಬಿ. ಖುರಾನಾ ಹೇಳಿದ್ದಾರೆ. ಈ ತಿಂಗಳಲ್ಲಿಯೇ ಇದುವರೆಗೆ 268 ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಕೂಲಿಗಳು, ಮನೆಯಲ್ಲಿ ಸಹಾಯಕ ಕೆಲಸಕ್ಕಾಗಿ ಬಾಂಗ್ಲಾದಿಂದ ಅವರು ಆಗಮಿಸಿದ್ದರು. 2019ರಲ್ಲಿ ಬಿಎಸ್‌ಎಫ್ 2,194 ಮಂದಿ ಬಾಂಗ್ಲಾದೇಶಿಯರನ್ನು ಸೆರೆ ಹಿಡಿದಿತ್ತು.

ಬಂದ್‌ಗೆ ನೀರಸ ಪ್ರತಿಕ್ರಿಯೆ: ಸಿಎಎ,
ಎನ್‌ಆರ್‌ಸಿ ವಿರೋಧಿಸಿ ದಲಿತ ನಾಯಕ ಪ್ರಕಾಶ್‌ ಅಂಬೇಡ್ಕರ್‌ ಕರೆ ನೀಡಿದ್ದ ಮಹಾರಾಷ್ಟ್ರ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಕಡೆ ಬಸ್‌ಗಳಿಗೆ ಕಲ್ಲು ತೂರಾಟದಂಥ ಘಟನೆಗಳು ನಡೆದಿದ್ದು, ಬಹುತೇಕ ಜನಜೀವನ ಎಂದಿನಂತೆ ಸಹಜವಾಗಿತ್ತು. ಇದೇ ವೇಳೆ, ಸಿಎಎ ವಿರೋಧಿಸಿ ಮಧ್ಯ ಪ್ರದೇಶ ಬಿಜೆಪಿಯ 80 ಮುಸ್ಲಿಂ ನಾಯಕರು ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ರಾಷ್ಟ್ರಪತಿಗೆ ಪತ್ರ: ಸಿಎಎ ವಿರೋಧಿ ಪ್ರತಿಭಟನೆ ಹೆಸರಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ 154 ಮಂದಿ ಗಣ್ಯರು ಶುಕ್ರವಾರ ರಾಷ್ಟ್ರಪತಿ ಕೋವಿಂದ್‌ಗೆ ಪತ್ರ ಬರೆದಿದ್ದಾರೆ.

ಸುಪ್ರೀಂ ನಕಾರ: ಈ ನಡುವೆ, ದಿಲ್ಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

Comments are closed.