ರಾಷ್ಟ್ರೀಯ

ಸಂಸದ ಆಜಂ ಖಾನ್‌ ನಾಪತ್ತೆ: ಸಾರ್ವಜನಿಕ ಪ್ರಕಟನೆ

Pinterest LinkedIn Tumblr


ರಾಮ್‌ಪುರ: ‘ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ, ಸಂಸದ ಆಜಂ ಖಾನ್‌, ಅವರ ಪತ್ನಿ ಹಾಗೂ ಪುತ್ರ ನಾಪತ್ತೆಯಾಗಿದ್ದಾರೆ’ ಎಂದು ಅವರ ಮನೆ ಮುಂದೆ ಪೊಲೀಸರು ಪೋಸ್ಟರ್‌ ಅಂಟಿಸಿದ್ದಾರೆ. ಇತ್ತೀಚೆಗೆ 3 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಗೈರಾಗಿದ್ದಕ್ಕೆ ಆಜಂಖಾನ್‌, ಅವರ ಪತ್ನಿ ಹಾಗೂ ಪುತ್ರ ಕಾಣೆಯಾಗಿದ್ದಾರೆ ಎಂದು ನ್ಯಾಯಾಲಯ ಘೋಷಿಸಿತ್ತು.

ಅಲ್ಲದೇ ಜ. 24ರೊಳಗೆ ವಿಚಾರಣೆಗೆ ಹಾಜರಾಗದಿದ್ದರೆ ಅವರ ಆಸ್ತಿ ಜಪ್ತಿ ಮಾಡುವಂತೆ ಆದೇಶಿಸಿತ್ತು. ಇದೀಗ ಕೋರ್ಟ್‌ ಆದೇಶದ ಮೇರೆಗೆ ಆಜಂ ಕುಟುಂಬಸ್ಥರು ತಲೆ ಮರೆಸಿಕೊಂಡಿದ್ದಾರೆ ಎಂದು ಜಿಲ್ಲಾಡಳಿತವು, ಸಾರ್ವಜನಿಕವಾಗಿ ಪ್ರಕಟನೆ ಹೊರಡಿಸಿದೆ.

ಜ. 3ರಂದು ಬಿಜೆಪಿ ಮುಖಂಡ ಆಕಾಶ್‌ ಸಕ್ಸೇನಾ, ನಕಲಿ ಜನನ ದೃಢೀಕರಣ ಪತ್ರ ನೀಡಲು ಆಜಂಖಾನ್‌ ಕುಟುಂಬದವರು ನೆರವು ನೀಡಿದ್ದಾರೆ ಎಂದು ಆಪಾದಿಸಿ ದೂರು ದಾಖಲಿಸಿದ್ದರು. ಇನ್ನೆರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಜ. 20ಕ್ಕೆ ಕೋರ್ಟ್‌ಗೆ ಹಾಜರಾಗುವಂತೆ ಆಜಂ ಖಾನ್‌ಗೆ ಸೂಚನೆ ನೀಡಲಾಗಿದೆ.

Comments are closed.