ರಾಷ್ಟ್ರೀಯ

ಮರಣದಂಡನೆ ವಿರುದ್ಧ ಸುಪ್ರೀಂಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ ನಿರ್ಭಯಾ ಪ್ರಕರಣದ ಅಪರಾಧಿ ವಿನಯ್

Pinterest LinkedIn Tumblr


ನವದೆಹಲಿ: 2012ರ ದಿಲ್ಲಿ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾಗಿರುವ ವಿನಯ್ ಕುಮಾರ್ ಶರ್ಮಾ ಗುರುವಾರ ಸುಪ್ರೀಂಕೋರ್ಟ್ ನಲ್ಲಿ ಕ್ಯುರೇಟಿವ್(ಲೋಪ ಸರಿಪಡಿಸಲು ಸಲ್ಲಿಸುವ ಅರ್ಜಿ) ಅರ್ಜಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.

ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 7ರಂದು ದಿಲ್ಲಿ ಪಟಿಯಾಲಾ ಹೌಸ್ ಕೋರ್ಟ್ ಹೆಚ್ಚುವರಿ ಸೆಷನ್ಸ್ ಜಡ್ಜ್ ಸತೀಶ್ ಕುಮಾ್ ಆರೋರಾ ಅವರು ನಾಲ್ವರು ಅಪರಾಧಿಗಳಾದ ವಿನಯ್, ಪವನ್, ಅಕ್ಷಯ್ ಮತ್ತು ಮಖೇಶ್ ಸಿಂಗ್ ಗೆ ಜನವರಿ 22ರ ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸುವಂತೆ ಡೆತ್ ವಾರಂಟ್ ಹೊರಡಿಸಿದ್ದರು.

ವಿನಯ್ ಸೇರಿದಂತೆ ಪವನ್, ಅಕ್ಷಯ್ ಠಾಕೂರ್ ಹಾಗೂ ಮಹೇಶ್ ಸಿಂಗ್ ಕೂಡಾ ಮರಣದಂಡನೆ ಶಿಕ್ಷೆ ಎದುರು ನೋಡುತ್ತಿದ್ದಾರೆ. ಕೋರ್ಟ್ ಇದೀಗ ನಾಲ್ವರ ಹೆಸರಿನಲ್ಲಿ ಬ್ಲ್ಯಾಕ್ ವಾರಂಟ್ ಹೊರಡಿಸಿದೆ. ಈ ಸಂದರ್ಭದಲ್ಲಿ ಡೆತ್ (ಬ್ಲ್ಯಾಕ್) ವಾರಂಟ್ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಪಟಿಯಾಲಾ ಹೌಸ್ ಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ. ಅಲ್ಲದೇ ರಾಷ್ಟ್ರಪತಿ ಬಳಿ ಇನ್ನೊಮ್ಮೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಅಥವಾ ರಾಷ್ಟ್ರಪತಿಗಳು ಅರ್ಜಿ ಸ್ವೀಕರಿಸಿದರೆ ಡೆತ್ ವಾರಂಟ್ ಗೆ ತಡೆ ಸಿಗಲಿದೆ.

ಡೆತ್ ವಾರಂಟ್ ಜಾರಿ ಸುದ್ದಿ ಕೇಳಿ ನಾಲ್ವರು ತಿಹಾರ್ ಜೈಲಿನೊಳಗೆ ಕುಸಿದು ಬಿದ್ದಿರುವ ಘಟನೆ ನಡೆದಿತ್ತು. ಡೆತ್ ವಾರಂಟ್ ಜಾರಿಗೊಳಿಸಿದ 14 ದಿನದ ನಂತರ ಶಿಕ್ಷೆ ಜಾರಿಯಾಗಲಿದೆ. ಕಾನೂನಿನ ಪ್ರಕಾರ ಈ ಕಾಲಾವಕಾಶದಲ್ಲಿ ಅಪರಾಧಿಗಳು ತಮಗಿರುವ ಕೊನೆಯ ಕಾನೂನು ಅವಕಾಶ ಬಳಸಿಕೊಳ್ಳಲು ಅವಕಾಶವಿದೆ.

Comments are closed.