ರಾಷ್ಟ್ರೀಯ

ದಿಲ್ಲಿಯಲ್ಲಿ ಮತ್ತೆ ‘ಕೇಜ್ರಿ’ ಸರ್ಕಾರ..?

Pinterest LinkedIn Tumblr


ಹೊಸದಿಲ್ಲಿ: ಬಹುತೇಕ 2015ರ ಫಲಿತಾಂಶವೇ ವಿಧಾನಸಭೆ ಚುನಾವಣೆಯಲ್ಲಿ ಮರುಕಳಿಸುವ ಸಾಧ್ಯತೆ ಇದೆ. ಆಡಳಿತಾರೂಢ ಆಮ್‌ ಆದ್ಮಿ ಪಾರ್ಟಿ ಕ್ಲೀನ್‌ಸ್ವೀಪ್‌ನೊಂದಿಗೆ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಈ ಸಂಬಂಧ ಹೊರಬಿದ್ದಿರುವ ಸಮೀಕ್ಷೆಗಳು ಕೇಜ್ರಿವಾಲ್‌ಗೆ ಗುಡ್‌ ನ್ಯೂಸ್‌ ನೀಡಿವೆ.

ಐಎಎನ್‌ಎಸ್‌-ಸಿ ವೋಟರ್‌ ಸಮೀಕ್ಷೆ ಪ್ರಕಾರ, ಆಪ್‌ 59, ಬಿಜೆಪಿ 8 ಹಾಗೂ ಕಾಂಗ್ರೆಸ್‌ 3 ಸ್ಥಾನ ಗಳಿಸಲಿವೆ. ದಿಲ್ಲಿ ರಾಜ್ಯವನ್ನು ಗೆಲ್ಲಲು ಎರಡು ದಶಕಗಳಿಂದ ಹೋರಾಡುತ್ತಿರುವ ಬಿಜೆಪಿಗೆ, ಈ ಸಲವೂ ಯಶಸ್ಸು ಸಿಗುವುದಿಲ್ಲ ಎಂದು ಸಮೀಕ್ಷೆ ಹೇಳಿದೆ. ಸ್ವಲ್ಪ ಏರುಪೇರಾದರೂ ಕಾಂಗ್ರೆಸ್‌ ಕಳೆದ ಸಲದಂತೆ ಶೂನ್ಯ ಸಾಧನೆ ಮಾಡಿದರೂ ಅಚ್ಚರಿ ಇಲ್ಲ ಎಂದು ಸಮೀಕ್ಷೆ ತಿಳಿಸಿದೆ.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಎಲ್ಲಾ 70 ಸ್ಥಾನಗಳನ್ನೂ ಗೆಲ್ಲುವ ಗುರಿಯೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಸಮೀಕ್ಷೆ ಪ್ರಕಾರ, ದಿಲ್ಲಿ ಹೊರವಲಯದ ಎಲ್ಲ 26 ಕ್ಷೇತ್ರಗಳೂ ಆಪ್‌ ಪಾಲಾಗಲಿವೆ. ಕೇಂದ್ರ ದಿಲ್ಲಿಯಲ್ಲಿ 17 ಮತ್ತು ಹಳೆ ದಿಲ್ಲಿಯಲ್ಲಿ 16 ಸ್ಥಾನಗಳನ್ನು ಆಪ್‌ ಗೆಲ್ಲಲಿದೆ ಎನ್ನಲಾಗಿದೆ.

Comments are closed.