ರಾಷ್ಟ್ರೀಯ

ನಿರ್ಭಯಾ ಪ್ರಕರಣ ಅಪರಾಧಿಗಳಿಗೆ ಜ.22ಕ್ಕೆ ಮರಣದಂಡನೆ

Pinterest LinkedIn Tumblr


ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಯ ಆರೋಪಿಯ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಒಂದು ತಿಂಗಳ ನಂತರ ನಾಲ್ವರು ಆರೋಪಿಗಳಿಗೆ ಶೀಘ್ರ ಗಲ್ಲುಶಿಕ್ಷೆ ವಿಧಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ಮಂಗಳವಾರ ಡೆತ್ ವಾರಂಟ್ ಜಾರಿ ಮಾಡಿದೆ.

ಜನವರಿ 22ನೇ ತಾರೀಕು ಬೆಳಗ್ಗೆ 7 ಗಂಟೆಗೆ ಅಪರಾಧಿಗಳಾದ ಅಕ್ಷಯ್, ಮುಖೇಶ್, ವಿನಯ್, ಪವನ್ ಗೆ ಮರಣದಂಡನೆ ಶಿಕ್ಷೆ ವಿಧಿಸಲು ಕೋರ್ಟ್ ಡೆತ್ ವಾರಂಟ್ ಜಾರಿಗೊಳಿಸಿದೆ.

ಕಾನೂನಿನ ಪ್ರಕಾರ, ಅಪರಾಧಿಗಳಿಗೆ ಲಭ್ಯವಾಗಬೇಕಾದ ಎಲ್ಲಾ ಕಾನೂನು ಅವಕಾಶಗಳ ಬಾಗಿಲು ಸಂಪೂರ್ಣ ಮುಚ್ಚಿದ ನಂತರ ಕೊನೆಯ ಹಂತವಾದ ಮರಣದಂಡನೆ ಪ್ರಕ್ರಿಯೆಗಾಗಿ ಕೋರ್ಟ್ ಬ್ಲ್ಯಾಕ್ ವಾರಂಟ್ (ಡೆತ್ ವಾರಂಟ್) ಹೊರಡಿಸುತ್ತದೆ.

2012ರ ಡಿಸೆಂಬರ್ 16ರಂದು ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದರು. ಕೆಲವು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ನಿರ್ಭಯಾ ಸಾವನ್ನಪ್ಪಿದ್ದಳು. ಈ ಘಟನೆ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Comments are closed.