ರಾಷ್ಟ್ರೀಯ

ಇರಾನ್-ಅಮೆರಿಕ ಯುದ್ಧ ಭೀತಿ: ಟ್ರಂಪ್ ಗೆ ಮೋದಿ ದೂರವಾಣಿ ಕರೆ

Pinterest LinkedIn Tumblr


ನವದೆಹಲಿ: ಇರಾನ್, ಇರಾಕ್ ಮತ್ತು ಅಮೆರಿಕ ನಡುವೆ ಯುದ್ಧ ಭೀತಿ ತಲೆದೋರಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿ ಕುಟುಂಬದ ಸದಸ್ಯರಿಗೂ ಹಾಗೂ ಅಮೆರಿಕದ ನಿವಾಸಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಕಳೆದ ಹಲವಾರು ವರ್ಷಗಳಿಂದ ಗಟ್ಟಿಯಾಗಿದ್ದು, ತಂತ್ರಕೌಶಲ್ಯದ ಸಹಭಾಗಿತ್ವ ಇನ್ನಷ್ಟು ವೃದ್ಧಿಸುವ ಕುರಿತು ಪ್ರಧಾನಿ ಮೋದಿ ದೂರವಾಣಿಯಲ್ಲಿ ಟ್ರಂಪ್ ಜತೆ ಚರ್ಚಿಸಿರುವುದಾಗಿ ವರದಿ ವಿವರಿಸಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಸಂಘರ್ಷ ಹಾಗೂ ಇಂಧನ ಆಮದು ಬಗ್ಗೆ ಎದುರಿಸುವ ತೊಂದರೆ ಕುರಿತು ಈ ಸಂದರ್ಭದಲ್ಲಿ ಚರ್ಚಿಸಿದ್ದಾರೆಂದು ವರದಿ ಹೇಳಿದೆ.

ಕೇಂದ್ರದ ಪ್ರಕಟಣೆ ಪ್ರಕಾರ, ಅಮೆರಿಕ ಅಧ್ಯಕ್ಷರ ಜತೆಗಿನ ಕಾರ್ಯ ಮುಂದುವರಿಸುವ ಅಭಿಲಾಸೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಸಮಾನಾಸಕ್ತ ವಿಷಯಗಳಿಗೆ ಸಹಕಾರ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.

ಕಳೆದ ಕೆಲವು ವರ್ಷಗಳಿಂದ ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧದ ವೃದ್ಧಿ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ತೃಪ್ತಿ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ. ಈ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಕೂಡಾ ಪ್ರಧಾನಿ ಮೋದಿ ಹಾಗೂ ಭಾರತದ ಪ್ರಜೆಗಳಿಗೆ ಹೊಸ ವರ್ಷದ ಶುಭಾಶಯ ಕೋರಿರುವುದಾಗಿ ವರದಿ ವಿವರಿಸಿದೆ.

Comments are closed.