ರಾಷ್ಟ್ರೀಯ

ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ !

Pinterest LinkedIn Tumblr

ನವದೆಹಲಿ: ಇಂಧನ ಬೆಲೆ ಮತ್ತೆ ಏರಿಕೆಯಾಗುತ್ತಿದ್ದು ಪೆಟ್ರೋಲ್ ಬೆಲೆ ಲೀಟರ್ ಗೆ 5 ಪೈಸೆ ಮತ್ತು ಡೀಸೆಲ್ ಬೆಲೆ 12 ಪೈಸೆ ಏರಿಕೆಯಾಗಿದೆ.

ಭಾರತೀಯ ತೈಲ ನಿಗಮದ ವೆಬ್ ಸೈಟ್ ನ ಪ್ರಕಾರ ಇಂದು ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್ ಗೆ 75 ಲೀಟರ್ 74 ಪೈಸೆ, ಕೋಲ್ಕತ್ತಾದಲ್ಲಿ ಲೀಟರ್ ಗೆ 78 ರೂಪಾಯಿ 33 ಪೈಸೆ, ಮುಂಬೈಯಲ್ಲಿ 81 ರೂಪಾಯಿ 33 ಪೈಸೆ, ಚೆನ್ನೈಯಲ್ಲಿ ಲೀಟರ್ ಗೆ 78 ರೂಪಾಯಿ 69 ಪೈಸೆಯಾಗಿದೆ.

ಡೀಸೆಲ್ ಬೆಲೆ ಲೀಟರ್ ಗೆ ದೆಹಲಿಯಲ್ಲಿ 68 ರೂಪಾಯಿ 79 ಪೈಸೆ, ಮುಂಬೈಯಲ್ಲಿ 72 ರೂಪಾಯಿ 14 ಪೈಸೆ, ಕೋಲ್ಕತ್ತಾದಲ್ಲಿ 71 ರೂಪಾಯಿ 15 ಪೈಸೆ, ಚೆನ್ನೈಯಲ್ಲಿ 72 ರೂಪಾಯಿ 69 ಪೈಸೆಯಾಗಿದೆ.

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 78 ರೂಪಾಯಿ 28 ಪೈಸೆ ಮತ್ತು ಡೀಸೆಲ್ ಬೆಲೆ 71 ರೂಪಾಯಿ 08 ಪೈಸೆಯಾಗಿದೆ.

ಹೊಸ ವರ್ಷ 2020ರ 7 ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 60 ಪೈಸೆ ಮತ್ತು ಡೀಸೆಲ್ ಬೆಲೆ 83 ಪೈಸೆ ಏರಿಕೆಯಾಗಿದೆ.

ಇರಾನ್ ಸೇನಾಧಿಕಾರಿ ಖ್ವಾಸೆಮ್ ಸೊಲೈಮಾನಿ ಹತ್ಯೆ ಬಳಿಕ ಮಧ್ಯ ಪ್ರಾಚ್ಯಾ ದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 70 ಡಾಲರ್ ದಾಟಿ ಇಂದು ಸ್ವಲ್ಪ ಇಳಿಕೆಯಾಯಿತು.

Comments are closed.