ರಾಷ್ಟ್ರೀಯ

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಗಾಳಿ ಶುದ್ಧೀಕರಣ ಟವರ್‌ ನಿರ್ಮಾಣ

Pinterest LinkedIn Tumblr


ನವದೆಹಲಿ: ಗ್ಯಾಸ್‌ ಚೇಂಬರ್‌ನಂತಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಾಳಿ ಶುದ್ಧೀಕರಣಕ್ಕೆ ಇದೇ ಮೊದಲ ಬಾರಿಗೆ ಟವರ್‌ ನಿರ್ಮಿಸಲಾಗಿದೆ.

ಲಜಪತ್‌ ನಗರದ ಕೇಂದ್ರೀಯ ಮಾರುಕಟ್ಟೆಯಲ್ಲಿ 7 ಲಕ್ಷ ರೂ. ವೆಚ್ಚದ 20 ಅಡಿ ಎತ್ತರವಿರುವ ಗಾಳಿ ಶುದ್ಧೀಕರಣ ಟವರ್‌ ಸ್ಥಾಪಿಸಲಾಗಿದೆ.

ಜನನಿಬಿಡ ಪ್ರದೇಶ ಇದಾಗಿದ್ದು, ನಿತ್ಯ 15 ಸಾವಿರ ಮಂದಿ ಇಲ್ಲಿ ಸಂಚರಿಸುತ್ತಾರೆ. ಲಜಪತ್‌ ನಗರದ ವರ್ತಕರ ಸಂಘವು ಸಂಸದ ಗೌತಮ್‌ ಗಂಭೀರ್‌ ಸಹಕಾರದೊಂದಿಗೆ ಈ ಟವರ್‌ ಅಳವಡಿಸಿದೆ. ಈ ಟವರ್‌ ನಿರ್ವಹಣೆಗೆ ವಾರ್ಷಿಕ 30 ಸಾವಿರ ರೂ. ಆಗಲಿದ್ದು, ವರ್ತಕರ ಸಂಘವು ಈ ವೆಚ್ಚವನ್ನು ಭರಿಸಲಿದೆ. ಗಾಳಿ ಗುಣಮಟ್ಟ ಸೂಚ್ಯಂಕ ಪ್ರಕಾರ, ಈ ಪ್ರದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ವಿಪರೀತವಾಗಿತ್ತು.

ಕಾರ್ಯನಿರ್ವಹಣೆ ಹೇಗೆ?:
ಈ ಟವರ್‌ ಶೇ.80ರಷ್ಟು ವಾಯುಮಾಲಿನ್ಯ ನಿವಾರಿಸಲಿದೆ. ಇದರ ಸುತ್ತಲಿನ 500-750 ಮೀಟರ್‌ ವ್ಯಾಪ್ತಿಯವರೆಗೆ ವಾಯು ಮಾಲಿನ್ಯ ನಿಯಂತ್ರಿಸುವ ಸಾಮರ್ಥ್ಯ ಈ ಟವರ್‌ಗಿದೆ. ಪ್ರತಿದಿನ 2.50 ಲಕ್ಷದಿಂದ 6 ಲಕ್ಷ ಕ್ಯೂಬಿಕ್‌ ಗಾಳಿಯನ್ನು ಶುದ್ಧೀಕರಿಸಲಿದೆ.

ಟವರ್‌ ನಿರ್ಮಾಣ ವೆಚ್ಚ- 7 ಲಕ್ಷ ರೂ.
ದಿನಕ್ಕೆ ಎಷ್ಟು ಗಾಳಿ ಶುದ್ಧೀಕರಣ?- 2.50 ಲಕ್ಷದಿಂದ 6 ಲಕ್ಷ ಕ್ಯೂಬಿಕ್‌ ಗಾಳಿ
ಟವರ್‌ನ ಎತ್ತರ- 20 ಅಡಿ (ನೆಲ ಮಟ್ಟದಿಂದ 24 ಅಡಿ)
ನಿರ್ವಹಣೆ ವೆಚ್ಚ- ವಾರ್ಷಿಕ 30 ಸಾವಿರ ರೂ.
ಟವರ್‌ ನಿರ್ವಹಣೆ ವ್ಯಾಪ್ತಿ-500ರಿಂದ 750 ಮೀಟರ್‌

Comments are closed.