ರಾಷ್ಟ್ರೀಯ

ವಿಫಲವಾದ ಅಪಹರಣ ಯತ್ನ: ಆಕ್ರೋಶಗೊಂಡು ಯುವತಿ ಮೂಗನ್ನೇ ಕತ್ತರಿಸಿದ ಅಪಹರಣಕಾರರು!

Pinterest LinkedIn Tumblr


ಗುರುಗ್ರಾಮ್: ಯವತಿಯನ್ನು ಅಪಹರಿಸಲು ವಿಫಲವಾಗಿದ್ದಕ್ಕೆ ಆಕ್ರೋಶಗೊಂಡ ಗುಂಪೊಂದು ಆಕೆಯ ಮೂಗನ್ನು ಕತ್ತರಿಸಿ ಹಾಕಿರುವ ಘಟನೆ ಗುರುಗ್ರಾಮದ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಚಾಕ್ಕಾರ್ ಪುರ್ ಗ್ರಾಮದಲ್ಲಿನ ಮನೆಯಲ್ಲಿದ್ದಾಗ ಗೌರವ್ ಯಾದವ್, ಆಕಾಶ್ ಯಾದವ್, ಸತೀಶ್ ಯಾದವ್, ಮೋನು ಯಾದವ್ ಮತ್ತು ಲೀಲೂ ಯಾದವ್ ಮನೆಯೊಳಗೆ ನುಗ್ಗಿ ಆಕೆಯನ್ನು ಹೊರಗೆಳೆದು ಅಪಹರಿಸಲು ಯತ್ನಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ಅಪಹರಣಕಾರರನ್ನು ತಡೆಯಲು ಯತ್ನಿಸಿರುವುದಾಗಿ ಯವತಿಯ ಸಹೋದರ ತಿಳಿಸಿದ್ದಾನೆ. ಆದರೆ ಯವತಿಯನ್ನು ಮನೆಯೊಳಗಿನಿಂದ ಹೊರಗೆ ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಇಬ್ಬರು ಆಕೆಯ ಮೂಗನ್ನು ಹರಿತ ಆಯುಧದಿಂದ ಕತ್ತರಿಸಿ ಹಾಕಿರುವುದಾಗಿ ವರದಿ ತಿಳಿಸಿದೆ.

ಈ ಗ್ರಾಮದಲ್ಲಿನ ಬಲಾಢ್ಯ ವ್ಯಕ್ತಿಗಳು ಅವರು. ಅವರು ರಾಜಾರೋಷವಾಗಿ ಎಲ್ಲರ ಜತೆ ಹೊಡೆದಾಡುತ್ತಾರೆ. ಅಲ್ಲದೇ ಪೊಲೀಸ್ ಠಾಣೆಗೆ ದೂರು ನೀಡಿದರೆ ಬೆದರಿಕೆ ಮೂಲಕ ವಾಪಸ್ ಪಡೆಯುವಂತೆ ಮಾಡುತ್ತಾರೆ. ನಮಗೂ ಕೂಡಾ ಹಾಗೆ ಮಾಡುತ್ತಾರೆ. ಇದರಿಂದ ನಮಗೆ ಭಯ ಆವರಿಸಿದೆ ಎಂದು ಯುವತಿಯ ಸಹೋದರ ದಿವೀನ್ ದಯಾಲ್ ತಿಳಿಸಿದ್ದರು. ಘಟನೆ ಬಗ್ಗೆ ಗುರ್ಗಾಂವ್ ಸೆಕ್ಟರ್ 29ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ವರದಿ ತಿಳಿಸಿದೆ.

Comments are closed.