ಮನೋರಂಜನೆ

ಮೋದಿಯನ್ನು ಹಿಟ್ಲರ್​ಗೆ ಹೋಲಿಸಿದ್ದ ವಿಡಿಯೋವನ್ನು ಅನುರಾಗ್​ ಕಶ್ಯಪ್​ ಡಿಲೀಟ್​ ಮಾಡಿದ್ದೇಕೆ?

Pinterest LinkedIn Tumblr


ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ಪ್ರಧಾನಿ ನರೇಂದ್ರ ಮೋದಿ ಒಬ್ಬ “ಅರ್ಬನ್​ ನಾಜಿ” ಎಂದು ಜರೆದು, ಹಿಟ್ಲರ್​ಗೆ ಹೋಲಿಸಿ ವಿಡಿಯೋ ಪೋಸ್ಟ್​ ಮಾಡಿ ಬಳಿಕ ಅದನ್ನು ಡಿಲೀಟ್​ ಮಾಡಿದ್ದಾರೆ.

ಸೋಮವಾರ ಬೆಳಗ್ಗೆ ಸರ್ವಾಧಿಕಾರರಿ ಅಡಾಲ್ಫ್​ ಹಿಟ್ಲರ್​ ವಿಡಿಯೋವನ್ನು ಕಶ್ಯಪ್​ ಪೋಸ್ಟ್​ ಮಾಡಿದ್ದರು. ಯಾರು ನನ್ನನ್ನು ದ್ವೇಷಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನೀವು ನನ್ನನ್ನು ದ್ವೇಷಿಸಿ ಆದರೆ, ಜರ್ಮನಿಯನ್ನು ದ್ವೇಷಿಸಬೇಡಿ ಎಂಬ ಹಿಟ್ಲರ್​ ಆಡಿದ ಮಾತುಗಲು ವಿಡಿಯೋದಲ್ಲಿತ್ತು.

ವಿಡಿಯೋ ಕುರಿತಾದ ಅನುವಾದ ತಪ್ಪಾಗಿದೆ. ಹಿಟ್ಲರ್​ ಹೇಳಿದ್ದು ಈ ರೀತಿಯಲ್ಲ. ಎಲ್ಲದಕ್ಕೂ ಹಿಟ್ಲರ್​ ಹೋಲಿಕೆ ಸರಿಯಲ್ಲ ಎಂಬ ಸಾಕಷ್ಟು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಕಶ್ಯಪ್​ ವಿಡಿಯೋವನ್ನು ಡಿಲೀಟ್​ ಮಾಡಿದ್ದಾರೆ.

ಭಾನುವಾರ ರಾಮಲೀಲ್​ ಮೈದಾನದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ನನ್ನ ಪ್ರತಿಮೆ ಬೇಕಾದರೆ ಸುಟ್ಟು ಹಾಕಿ ಆದರೆ, ಸಾರ್ವಜನಿಕ ಆಸ್ತಿಯನ್ನು ಸುಡಬೇಡಿ. ಬೇಕಾದರೆ ನನ್ನನ್ನು ದ್ವೇಷಿಸಿ ಆದರೆ, ಭಾರತವನ್ನು ದ್ವೇಷಿಸಬೇಡಿ ಎಂದಿದ್ದರು. ಈ ಹಿನ್ನೆಲೆಯಲ್ಲಿ ಕಶ್ಯಪ್​ ಹಿಟ್ಲರ್​ ವಿಡಿಯೋ ಪೋಸ್ಟ್​ ಮಾಡಿ ತಿರುಗೇಟು ನೀಡಲು ಯತ್ನಿಸಿದ್ದರು. ಆದರೆ, ತೀವ್ರ ಮುಖಭಂಗ ಅನುಭವಿಸಿದ ನಂತರ ವಿಡಿಯೋ ತೆಗೆದುಹಾಕಿದ್ದಾರೆ.

ವಿಡಿಯೋ ಮಾತ್ರವಲ್ಲದೆ, ಭಾನುವಾರ ಸಂಜೆ ಟ್ವೀಟ್​ ಕೂಡ ಮಾಡಿದ್ದ ಕಶ್ಯಪ್​, ಪ್ರಧಾನಿ ಸಾಹೇಬರೇ ಎಲ್ಲೆಡೆ ಪೊಲೀಸರು ಸಾಮಾನ್ಯ ಜನರನ್ನು ಥಳಿಸುತ್ತಿದ್ದಾರೆ. ಅನೇಕರು ಸಾವಿಗೀಡಾಗಿದ್ದಾರೆ. ಇವೆಲ್ಲವನ್ನು ನೋಡಿ ಕುರುಡರಾಗಿರುವುದು ಸರಿಯಲ್ಲ. ಸಾಧ್ಯವಾದರೆ ಒಳ್ಳೆಯ ಕಣ್ಣಿನ ತಜ್ಞರನ್ನು ಭೇಟಿ ಮಾಡಿ, ಸುಳ್ಳು ಹೇಳುವುದನ್ನು ನಿಲ್ಲಿಸಿ, ಸಾವಿಗೀಡಾಗಿರುವವರ ಬಗ್ಗೆ ಸ್ವಲ್ಪವಾದರೂ ಮಾತನಾಡಿ ಎಂದು ಟೀಕಿಸಿದ್ದರು.

Comments are closed.