ನವದೆಹಲಿ: ತೆಲಂಗಾಣದ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದ ನಾಲ್ವರು ಆರೋಪಿಗಳ ಶವಗಳನ್ನು ಎರಡನೇ ಬಾರಿ ಪರೀಕ್ಷೆ ನಡೆಸಲು ಏಮ್ಸ್ (ಆಲ್ ಇಂಡಿಯಾ ಆಫ್ ಮೆಡಿಕಲ್ ಸೈನ್ಸ್) ಮೂವರು ಹಿರಿಯ ವಿಧಿವಿಜ್ಞಾನ ತಜ್ಞರನ್ನು ಕಳುಹಿಸಿದೆ ಎಂದು ವರದಿ ತಿಳಿಸಿದೆ.
ವಿಧಿವಿಜ್ಞಾನ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ, ಡಾ.ಆದರ್ಶ್ ಕುಮಾರ್ ಹಾಗೂ ಡಾ.ಅಭಿಷೇಕ್ ಯಾದವ್ ಅವರನ್ನೊಳಗೊಂಡ ಮೂವರು ತಜ್ಞರನ್ನು ಮೆಡಿಕಲ್ ಮಂಡಳಿ ನಾಲ್ವರು ಆರೋಪಿಗಳ ಮರು ಶವಪರೀಕ್ಷೆ ನಡೆಸಲು ರವಾನಿಸಿದೆ. ಶೈತ್ಯಾಗಾರದಲ್ಲಿ ಇರಿಸಿರುವ ಶವಗಳ ಪರೀಕ್ಷೆಯನ್ನು ಎರಡನೇ ಬಾರಿ ನಡೆಸುವುದು ತುಂಬಾ ವಿರಳ ಪ್ರಕರಣಗಳಲ್ಲಿ ಮಾತ್ರ ಎಂದು ಎಎನ್ ಐ ವರದಿ ಮಾಡಿದೆ.
ಮೂವರು ವಿಧಿವಿಜ್ಞಾನ ತಜ್ಞರು ಭಾನುವಾರ ಸಂಜೆ ಹೈದರಾಬಾದ್ ಗೆ ಆಗಮಿಸಿದ್ದು, ಸೋಮವಾರ ಮರು ಶವಪರೀಕ್ಷೆ ನಡೆಸಲಿದ್ದಾರೆ ಎಂದು ವರದಿ ವಿವರಿಸಿದೆ.
Comments are closed.