ರಾಷ್ಟ್ರೀಯ

ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಪಾಕ್ ಮೂಲದ ಉಗ್ರರು ! ಗುಪ್ತಚರ ದಳ ಎಚ್ಚರಿಕೆ

Pinterest LinkedIn Tumblr

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಡಿ.22 ರಂದು ಹತ್ಯೆ ಮಾಡಲು ಭಾರೀ ಸಂಚು ರೂಪಿಸಿದ್ದಾರೆಂದ ಸ್ಫೋಟಕ ಮಾಹಿತಿಯನ್ನು ಗುಪ್ತಚರ ದಳ ಎಚ್ಚರಿಗೆ ನೀಡಿದೆ.

ಡಿ.22 ರಂದು ದೆಹಲಿ ರಾಮಲೀಲಾ ಮೈದಾನದಲ್ಲಿ ಬಿಜೆಪಿ ಬೃಹತ್ ರ್ಯಾಲಿ ಆಯೋಜಿಸಿದ್ದು, ದೆಹಲಿಯ ಅಕ್ರಮ ಕಾಲೋನಿಗಳನ್ನು ಸಕ್ರಮಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಸಂಬಂಧ ಈ ರ್ಯಾಲಿ ನಡೆಯುತ್ತಿದೆ.

ಇದರಲ್ಲಿ ಮೋದಿಯವರು ಭಾಗವಹಿಸುತ್ತಿದ್ದು, ಈ ವೇಳೆ ಮೋದಿ ಹತ್ಯೆಗೆ ಉಗ್ರರು ಭಾರೀ ಸಂಚು ರೂಪಿಸಿದ್ದಾರೆಂದು ಗುಪ್ತಚರ ದಳವು ದೆಹಲಿ ಪೊಲೀಸರು ಹಾಗೂ ಪ್ರಧಾನಮಂತ್ರಿ ಭದ್ರತೆ ನೋಡಿಕೊಳ್ಳುವ ಎಸ್’ಜಿಪಿ ಪಡೆಗೆ ಸಂದೇಶ ರವಾನಿಸಿದೆ.

ರ್ಯಾಲಿದಲ್ಲಿ ವಿವಿಧ ರಾಜ್ಯಗಳ ಎನ್’ಡಿಎ ಮುಖ್ಯಮಂತ್ರಿಗಳು, ಕೇಂದ್ರ ಸಚಿವರುಗಳು, ಬಿಜೆಪಿ ನಾಯಕರು, ದೊಡ್ಡ ಪ್ರಮಾಣದಲ್ಲಿ ಜನರು ಹಾಗೂ ಪತ್ರಕರ್ತರು ನೆರೆಯಲಿದ್ದಾರೆ. ಅದೇ ಸಮಾರಂಭದಲ್ಲಿ ಮೋದಿ ಹತ್ಯೆ ಮಾಡಬೇಕೆಂದು ಉಗ್ರರು ಈಗ ಭಾರತಕ್ಕೆ ಬಂದು ಸೇರಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.

Comments are closed.