ರಾಷ್ಟ್ರೀಯ

ಸುಪ್ರೀಂ ತೀರ್ಪಿಗೆ ನಿರ್ಭಯಾ ತಾಯಿ ಸಂತಸ

Pinterest LinkedIn Tumblr


ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ದೋಷಿಗಳಲ್ಲಿ ಒಬ್ಬನಾಗಿರುವ ಅಕ್ಷಯ್ ಸಲ್ಲಿಸಿರುವ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಬುಧವಾರ ವಜಾಗೊಳಿಸಿ ನಾಲ್ವರು ಆರೋಪಿಗಳ ಗಲ್ಲುಶಿಕ್ಷೆಯನ್ನು ಎತ್ತಿಹಿಡಿದಿದೆ. ಸುಪ್ರೀಂ ತೀರ್ಪಿಗೆ ನಿರ್ಭಯಾ ತಾಯಿ ಸಂತಸ ವ್ಯಕ್ತಪಡಿಸಿದ್ದು, ಏಳು ವರ್ಷಗಳ ಬಳಿಕ ನಿರಾಳತೆ ಅನುಭವಿಸಿರುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿರುವ ನಿರ್ಭಯಾ ತಾಯಿ, ಈ ತೀರ್ಪಿನಿಂದ ಒಂದು ಹಂತ ನ್ಯಾಯದ ಸಮೀಪಕ್ಕೆ ತಂದು ನಿಲ್ಲಿಸಿದೆ. ಇಂದೇ ಕೋರ್ಟ್ ಆರೋಪಿಗಳಿಗೆ ಡೆತ್ ವಾರಂಟ್ ಜಾರಿ ಮಾಡಬೇಕು. ಕಳೆದ ಏಳು ವರ್ಷಗಳಿಂದ ತಾಳ್ಮೆಯಿಂದ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದ್ದು, ನಿರ್ಭಯಾಗೆ ಕೊನೆಗೂ ನ್ಯಾಯ ಸಿಕ್ಕಿದೆ ಎಂದರು.

Comments are closed.