
ಪಾಟ್ನಾ: ತನ್ನ ಮೇಲೆ ಅತ್ತೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಸೊಸೆಯ ವಿರುದ್ಧ ಪ್ರತಿ ದೂರು ದಾಖಲಾಗಿದೆ. ಲಾಲು ಪ್ರಸಾದ್ ಪತ್ನಿ ರಾಬ್ರಿ ದೇವಿ ತನ್ನ ವಿಚ್ಛೇದಿತ ಸೊಸೆ ಐಶ್ವರ್ಯ ರೈ ವಿರುದ್ಧ ಪ್ರತಿ ದೂರು ನೀಡಿದ್ದಾರೆ.
ರವಿವಾರ ಸಂಜೆ ಐಶ್ವರ್ಯ ತನ್ನ ಗಂಡ ತೇಜ್ ಪ್ರತಾಪ್ ಯಾದವ್, ಅತ್ತೆ ರಾಬ್ರಿ ದೇವಿ, ಮತ್ತು ನಾದಿನಿ ಮಿಸಾ ಬಿಷ್ಟ್ ವಿರುದ್ಧ ವರದಕ್ಷಿಣೆ ಮತ್ತು ಮನೆಯಿಂದ ಹೊರಹಾಕಿ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈಗ ಅತ್ತೆ ರಾಬ್ರಿ ದೇವಿ ಸೊಸೆಯ ವಿರುದ್ಧ ಪ್ರತಿ ದೂರು ನೀಡಿದ್ದು, ಸೊಸೆ ಐಶ್ವರ್ಯ ರೈ ನನಗೆ ಕಿರುಕುಳ ನೀಡಿದ್ದಾರೆ ಎಂದಿದ್ದಾರೆ.
ಐಶ್ವರ್ಯ ರೈ ತಂದೆ, ಆರು ಬಾರಿಯ ಶಾಸಕ ಚಂದ್ರಿಕ್ ರೈ ರಾಬ್ರಿ ದೇವಿಯ ಈ ಆಪಾದನೆಗಳನ್ನು ತಳ್ಳಿ ಹಾಕಿದ್ದು, ನಾನು ನನ್ನ ಮಕ್ಕಳಿಗೆ ಎಂತಹ ಬುದ್ದಿ ಕಲಿಸಿಲ್ಲ ಎಂದಿದ್ದಾರೆ.
Comments are closed.