ರಾಷ್ಟ್ರೀಯ

ವಿಶ್ವದ ನೂರು ಮಂದಿ ಅತೀ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್

Pinterest LinkedIn Tumblr


ನವದದೆಹಲಿ: ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವದ ನೂರು ಮಂದಿ ಪ್ರಭಾವಿ ಮಹಿಳೆಯರಲ್ಲಿ ಒಬ್ಬರಾಗಿದ್ದು, ಫೋರ್ಬ್ಸ್ ನ ಪಟ್ಟಿಯಲ್ಲಿ 34ನೇ ಸ್ಥಾನ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

ವಿಶ್ವದ ನೂರು ಮಂದಿ ಅತೀ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ 34ನೇ ಸ್ಥಾನ ಗಿಟ್ಟಿಸಿಕೊಂಡಿದ್ದು, ರಾಣಿ ಎಲಿಜಬೆತ್ -2 ಅವರನ್ನು ಹಿಂದಿಕ್ಕಿದ್ದು, ರಾಣಿ ಎಲಿಜಬೆತ್ 40ನೇ ಸ್ಥಾನ ಪಡೆದಿದ್ದಾರೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪುತ್ರಿ, ಸಲಹೆಗಾರ್ತಿ ಇವಾಂಕಾ ಟ್ರಂಪ್ ಫೋರ್ಬ್ಸ್ ನ ಪಟ್ಟಿಯಲ್ಲಿ 42ನೇ ಸ್ಥಾನ ಪಡೆದಿರುವುದಾಗಿ ವರದಿ ವಿವರಿಸಿದೆ.

ಭಾರತ ಜಾಗತಿಕವಾಗಿ ಬಲಶಾಲಿಯಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಅರ್ಡ್ರೆರ್ನ್ ಸೇರಿದಂತೆ ವಿಶ್ವದ ಕೆಲವು ಪ್ರಭಾವಶಾಲಿ ವ್ಯಕ್ತಿಗಳನ್ನು ಹಿಂದಿಕ್ಕಿರುವುದಾಗಿ ವರದಿ ತಿಳಿಸಿದೆ.

Comments are closed.