ರಾಷ್ಟ್ರೀಯ

ಈ ಮದುವೆಯಲ್ಲಿ ಗೆಳೆಯರು ನೀಡಿದ ಗಿಫ್ಟ್ ನೋಡಿ ಬಿಚ್ಚಿಬಿದ್ದ ನವದಂಪತಿಗಳು ! ಅಷ್ಟಕ್ಕೂ ಆ ಗಿಫ್ಟ್ ಏನು ಗೊತ್ತೇ…?

Pinterest LinkedIn Tumblr

ಸಂಬಂಧಿಕರು ಮತ್ತು ಸ್ನೇಹಿತರು ಮದುವೆ ಸಮಾರಂಭಗಳಲ್ಲಿ ವಧು-ವರರಿಗೆ ಉಡುಗೊರೆ ಕೊಡುವುದು ಸಾಮಾನ್ಯ. ಏನಾದರೊಂದು ವಿಶೇಷ ಉಡುಗೊರೆಗಳನ್ನು ನೀಡುತ್ತಾರೆ. ನೆನಪುಳಿಯುವಂತಹ ಅಥವಾ ಇಷ್ಟವಾಗುವ ವಿಭಿನ್ನ ಗಿಫ್ಟ್​​ಗಳನ್ನು ಕೊಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಮದುವೆಯಾದ ನವ ದಂಪತಿಗೆ ಅವರ ಗೆಳೆಯರು ಈರುಳ್ಳಿ ಇರುವ ಬೊಕ್ಕೆಯನ್ನು ನೀಡಿದ್ಧಾರೆ. ಇದು ವಿಚಿತ್ರ ಎನಿಸಿದರೂ ಸತ್ಯ.

ತಮಿಳುನಾಡಿನ ಕಡಲೂರಿನ ಮಂಜಕುಪ್ಪಂನಲ್ಲಿ ಮದುವೆಯೊಂದು ನೆರವೇರಿತ್ತು. ಈ ಮದುವೆಗೆ ಆಗಮಿಸಿದ್ದ ವರನ ಗೆಳೆಯರು 2.5 ಕೆ.ಜಿ ಈರುಳ್ಳಿಯ ಬೊಕ್ಕೆಯನ್ನು ನವ ದಂಪತಿಗೆ ನೀಡಿದ್ಧಾರೆ. ಹೂವಿನ ಬೊಕ್ಕೆ ಕೊಡುವುದು ಕಾಮನ್​, ಆದರೆ ಈರುಳ್ಳಿ ಬೊಕ್ಕೆ ಯಾಕೆ ಅಂತೀರಾ? ಈರುಳ್ಳಿ ಬೆಲೆ ಗಗನಕ್ಕೇರಿದ ಹಿನ್ನೆಲೆ, ಮದುವೆಗೆ ಆಗಮಿಸಿದ ಗೆಳೆಯರು ವಧು-ವರರಿಗೆ ಈರುಳ್ಳಿ ಬೊಕ್ಕೆ ಕೊಟ್ಟು ಮದುವೆ ಶುಭಾಷಯ ತಿಳಿಸಿದ್ದಾರೆ.

ಇದು ಮದುಮಕ್ಕಳಿಗೆ ತೀರಾ ಅನಿರೀಕ್ಷಿತ, ಆಶ್ಚರ್ಯಕರ ಮತ್ತು ವಿಭಿನ್ನ ಗಿಫ್ಟ್​ ಆಗಿತ್ತು. ಉಡುಗೊರೆ ಸ್ವೀಕರಿಸಿದ ವಧು ವರರು ಓಪನ್​ ಮಾಡಿ ನೋಡಿದಾಗ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉಪಯೋಗವಾಗುವಂತಹ ಗಿಫ್ಟ್​​ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇಶದೆಲ್ಲೆಡೆ ಈರುಳ್ಳಿ ದರ ಏರಿಕೆಯಾಗಿದೆ. ಕೆ.ಜಿ.ಈರುಳ್ಳಿ ಬೆಲೆ ಗರಿಷ್ಠ 200 ರೂ.ದಾಟಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲೂ ಈರುಳ್ಳಿ ಬೆಲೆ ಅಧಿಕವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗೆಳೆಯರ ಗುಂಪೊಂದು ಈರುಳ್ಳಿಯನ್ನು ಉಡುಗೊರೆಯಾಗಿ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.

ಹೆಲ್ಮೆಟ್​ ಕಡ್ಡಾಯ ಎಂಬ ಕಾನೂನು ಬಂದಾಗ ಇಂತಹದ್ದೇ ಘಟನೆ ನಡೆದಿತ್ತು. ಮದುವೆಯಾದ ನವದಂಪತಿಗೆ ಹೆಲ್ಮೆಟ್​ಗಳನ್ನು ಉಡುಗೊರೆಯಾಗಿ ನೀಡಿದ್ದರು.

Comments are closed.