ರಾಷ್ಟ್ರೀಯ

ಎಲ್ಲ ವಾಹನ ಮಾಲಕರೂ ತಮ್ಮ ವಾಹನ ಸಂಖ್ಯೆಗೆ ಮೊಬೈಲ್‌ ಸಂಖ್ಯೆ ಜೋಡಣೆ ಕಡ್ಡಾಯ

Pinterest LinkedIn Tumblr


ಹೊಸದಿಲ್ಲಿ: ಎಲ್ಲ ವಾಹನ ಮಾಲಕರೂ ತಮ್ಮ ವಾಹನಗಳ ಸಂಖ್ಯೆಗೆ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ಜೋಡಿಸುವ ನಿಯಮ ಎ. 1ರಿಂದ ದೇಶವ್ಯಾಪಿ ಕಡ್ಡಾಯವಾಗಲಿದೆ.

ಕೇಂದ್ರ ಸಾರಿಗೆ ಇಲಾಖೆ ನಿರ್ವಹಿ ಸುವ “ವಾಹನ್‌’ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ತಮ್ಮ ವಾಹನಗಳಿಗೆ ಮೊಬೈಲ್‌ ಸಂಖ್ಯೆಯನ್ನು ಜೋಡಿಸಬೇಕಿದೆ. ಇದರಿಂದ ವಾಹನ ನೋಂದಣಿಯು ಮತ್ತಷ್ಟು ಪರಿಣಾಮ ಕಾರಿಯಾಗಲಿದ್ದು, ಅನೇಕ ಪ್ರಯೋ ಜನಗಳನ್ನೂ ಮಾಲಕರು ಪಡೆಯಬಹುದಾಗಿದೆ.

ಈ ಹೊಸ ನಿಯಮ ಜಾರಿಗಾಗಿ 1989ರ ಕೇಂದ್ರ ಮೋಟಾರು ವಾಹನಗಳ ಅಧಿನಿಯಮಗಳಲ್ಲಿ ತಿದ್ದುಪಡಿ ತರಲು ಕೇಂದ್ರ ಸಾರಿಗೆ ಇಲಾಖೆ ನಿರ್ಧರಿಸಿದೆ. ಮೊಬೈಲ್‌ ಸಂಖ್ಯೆ ಜೋಡಣೆ ಕುರಿತಂತೆ ನ. 29ರಂದೇ ಆದೇಶ ಹೊರಡಿಸಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿದ ಸಾರಿಗೆ ಇಲಾಖೆ ಅಧಿಕಾರಿ, ಇದರಿಂದ ಮಾಲಕರಿಗೆ ಮುಂದೆ ವಾಹನಗಳ ಮಾಲಕತ್ವ ವರ್ಗಾವಣೆ, ನೋಂದಣಿ ನವೀಕರಣ, ನೋಂದಾವಣಿ ಪ್ರಮಾಣ ಪತ್ರದ ನಕಲು ಪ್ರತಿೆ, ಮಾಲಕರ ವಿಳಾಸ ಬದಲಾವಣೆಗೆ ಅನುಕೂಲವಾಗಲಿದೆ ಎಂದಿದ್ದಾರೆ.

Comments are closed.