ರಾಷ್ಟ್ರೀಯ

ಬಿಹಾರದಲ್ಲಿರುವ ಬಕ್ಸರ್ ಜೈಲಿನಲ್ಲಿ ತಯಾರಾಗುತ್ತಿರುವ ನಿರ್ಭಯಾ ಹಂತಕರಿಗೆ ನೇಣು ಕುಣಿಕೆ

Pinterest LinkedIn Tumblr


ಪಟ್ನಾ: ಬಿಹಾರದಲ್ಲಿರುವ ಬಕ್ಸರ್ ಜೈಲು ನೇಣು ಕುಣಿಕೆ ತಯಾರಿಕೆಗೆ ದೇಶದಲ್ಲೇ ಹೆಸರುವಾಸಿಯಾಗಿದೆ. ಇದೀಗ ಬಕ್ಸರ್ ಜೈಲು ಮತ್ತೆ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಹತ್ತು ನೇಣು ಕುಣಿಕೆಗಳನ್ನು ತಯಾರಿಸುವಂತೆ ಈ ಜೈಲಿಗೆ ಆದೇಶ ಬಂದಿದೆ.

ಹಾಗಾದರೆ ಈ ಹತ್ತು ನೇಣು ಕುಣಿಕೆಗಳು ಯಾವ ಪಾತಕಿಗಳನ್ನು ನೇಣಿಗೇರಿಸಲು ಎಂಬ ಕುತೂಹಲ ಮೂಡುವುದು ಸಹಜವೇ. ನಂಬಲರ್ಹ ಮಾಹಿತಿಗಳ ಪ್ರಕಾರ ದೆಹಲಿಯ ತಿಹಾರ್ ಜೈಲಿನಲ್ಲಿರುವ ನಿರ್ಭಯಾ ಅತ್ಯಾಚಾರಿಗಳನ್ನು ನೇಣಿಗೇರಿಸಲು ಈ ನೇಣು ಕುಣಿಕೆಗಳನ್ನು ತಯಾರಿಸಲು ಹೇಳಲಾಗಿದೆ ಎನ್ನಲಾಗುತ್ತಿದೆ.

ಡಿಸೆಂಬರ್ 14ರೊಳಗೆ ಹತ್ತು ನೇಣು ಕುಣಿಕೆಗಳನ್ನು ತಯಾರಿಸಿಕೊಡುವಂತೆ ಕೇಳಿಕೊಳ್ಳಲಾಗಿದೆ. ಇದನ್ನು ನೋಡಿದರೆ, 2012ರ ನಿರ್ಭಯಾ ಅತ್ಯಾಚಾರದ ಅಪರಾಧಿಗಳಿಗೆ ಶೀಘ್ರದಲ್ಲೇ ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆ ದಟ್ಟವಾಗಿದೆ. ನೇಣು ಕುಣಿಕೆ ತಯಾರಿಸುವ ವಿಧಾನವನ್ನು ತಿಳಿದಿರುವ ರಾಜ್ಯದ ಏಕೈಕ ಜೈಲು ಇದಾಗಿದೆ.

‘ಡಿಸೆಂಬರ್ 14ರ ಒಳಗಾಗಿ 10 ನೇಣು ಕುಣಿಕೆಗಳನ್ನು ತಯಾರಿಸಿಕೊಡುವಂತೆ ನಮಗೆ ಬಂಧೀಖಾನೆ ನಿರ್ದೇಶಕರಿಂದ ನಮಗೆ ಸೂಚನೆ ಬಂದಿದೆ. ಆದರೆ ಇದು ಎಲ್ಲಿಗೆಂದು ನಮಗೆ ತಿಳಿದಿಲ್ಲ’ ಎಂದು ಬಕ್ಸರ್ ಜೈಲು ಅಧೀಕ್ಷಕರಾಗಿರುವ ವಿಜಯ್ ಕುಮಾರ್ ಅರೋರಾ ಅವರು ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

Comments are closed.