ರಾಷ್ಟ್ರೀಯ

ಕರ್ನಾಟಕದಲ್ಲಿ ಜನಾದೇಶಕ್ಕೆ ಮೋಸ ಮಾಡಿದವರಿಗೆ ಮತದಾರರು ಸರಿಯಾಗಿಯೇ ಉತ್ತರ ನೀಡಿದ್ದಾರೆ: ಪ್ರಧಾನಿ ಮೋದಿ

Pinterest LinkedIn Tumblr

ಹಜಾರಿಬಾಗ್ (ಜಾರ್ಖಂಡ್): ಕರ್ನಾಟಕದಲ್ಲಿ ಜನಾದೇಶಕ್ಕೆ ಮೋಸ ಮಾಡಿದವರಿಗೆ ಅಲ್ಲಿನ ಮತದಾರರು ಪ್ರಜಾಪ್ರಭುತ್ವ ರೀತಿಯಲ್ಲೇ ಉತ್ತರ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಜಾರ್ಖಂಡ್ ವಿಧಾನಸಭೆ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಕರ್ನಾಟಕ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಉಲ್ಲೇಖಿಸಿದ ಪ್ರಧಾನಿ ಮೋದಿ ಅವರು, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಇಂದು ನಿರ್ಧರಿಸಿಲ್ಲ. ಅಲ್ಲಿನ ಜನರು ಕಾಂಗ್ರೆಸ್​ಗೆ ತಕ್ಕಶಾಸ್ತಿ ಮಾಡಿದ್ದಾರೆ. ಭಾರತದ ಯಾವುದೇ ರಾಜ್ಯದಲ್ಲಾದಲ್ಲಿ ಆಗಲಿ, ಜನಾದೇಶದ ವಿರುದ್ಧ ನಡೆದುಕೊಂಡರೆ ಅವರಿಗೆ ಜನತೆ ಅವಮಾನ ಮಾಡಬೇಕು ಹಾಗೂ ಮತದಾರರು ಅವರಿಗೆ ಸರಿಯಾದ ಪಾಠ ಕಲಿಸಬೇಕು ಎಂದರು.

ಕರ್ನಾಟಕದ 15 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸರ್ಕಾರದ ಅಡಿಪಾಯವನ್ನು ಭದ್ರ ಮಾಡಿಕೊಂಡಿದೆ. ಇನ್ನು ಕಾಂಗ್ರೆಸ್​ ಕೇವಲ 2 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿದ್ದರೆ, ಒಂದು ಸ್ಥಾನ ಪಡೆಯಲೂ ಜೆಡಿಎಸ್ ವಿಫಲವಾಗಿದೆ. ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

Comments are closed.