
ಲಕ್ನೋ: ವಿಭಾಗೀಯ ಪೊಲೀಸ್ ಆಯುಕ್ತ ಮುಖೇಶ್ ಮೆಶ್ರಾಮ್ ಅವರೊಂದಿಗೆ ನಡೆಸಿದ ಸುದೀರ್ಘ ಮಾತುಕತೆಯ ಬಳಿಕ ಅಂತಿಮವಾಗಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಮೃತದೇಹದ ಅಂತಿಮ ಸಂಸ್ಕಾರಕ್ಕೆ ಆಕೆಯ ಕುಟುಂಬ ಸದಸ್ಯರು ಸಮ್ಮತಿ ಸೂಚಿಸಿದ್ದಾರೆ.
ಶೇಖಡಾ 90 ಪ್ರತಿಶತ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತೆ ಶುಕ್ರವಾರ ರಾತ್ರಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಬರ್ಭರವಾಗಿ ಹಲ್ಲೆಗೊಳಗಾಗಿ ದೇಹ ದಹಿಸಿದ ಸ್ಥಿತಿಯಲ್ಲಿ ಕೊನೆಯುಸಿರೆಳೆದ 23 ವರ್ಷದ ಸಂತ್ರಸ್ತೆಯ ಅಂತಿಮ ಸಂಸ್ಕಾರ ನಡೆಸಬೇಕಾದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗುವ ಷರತ್ತನ್ನು ಈ ಮೊದಲು ಕುಟುಂಬ ಸದಸ್ಯರು ಇರಿಸಿದ್ದರು. ಮತ್ತು ಸಂತ್ರಸ್ತೆಯ ಅತ್ಯಾಚಾರ ಮತ್ತು ಸಾವಿಗೆ ಕಾರಣರಾದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೂ ಸಹ ಕುಟುಂಬ ಆಗ್ರಹಿಸಿತ್ತು.
Comments are closed.