
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಸತ್ ಅಧಿವೇಶನದಲ್ಲಿ ಗೈರು ಹಾಜರಿ ಹಾಕುತ್ತಿರುವ ಬಿಜೆಪಿ ಸಂಸದರ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಸಂಸತ್ತಿನಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದರೂ ಹಲವು ಬಾರಿ ಸದಸ್ಯರು ಗೈರು ಹಾಜರಿ ಹಾಕುತ್ತಿರುವುದಕ್ಕೆ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಮಂಗಳವಾರ ಬಿಜೆಪಿ ಸಂಸದೀಯ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರಧಾನಿ ಅಸಮಾಧಾನಗೊಂಡ ವಿಚಾರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸದರಿಗೆ ತಿಳಿಸಿ, ಗೈರು ಹಾಜರಿ ಹಾಕಬಾರದು ಎಂದು ಈ ಹಿಂದೆಯೇ ಸೂಚಿಸಿದ್ದರು ಸಂಸದರು ಪದೇ ಪದೇ ಗೈರು ಹಾಜರಿ ಹಾಕಿ ಈ ಸೂಚನೆಯನ್ನು ಉಲ್ಲಂಘಿಸುತ್ತಿದ್ದೀರಿ ಎಂದು ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಮುಂದೆ ನಾಗರಿಕ(ತಿದ್ದುಪಡಿ) ಮಸೂದೆ ಮಂಡಿಸಲಿದ್ದಾರೆ. ಜಮ್ಮುಕಾಶ್ಮೀರದ 370ನೇ ವಿಧಿ ರದ್ದುಗೊಳಿಸುವ ನಿರ್ಧಾರದಷ್ಟೇ ಇದು ಬಹಳ ಪ್ರಮುಖ ವಿಚಾರ. ಮುಂದೆ ಕಲಾಪದಲ್ಲಿ ಮಹತ್ವದ ಮಸೂದೆಗಳು ಮಂಡನೆಯಾಗಲಿದ್ದು ಈ ವೇಳೆ ನಿಮ್ಮ ಹಾಜರಿ ಅಗತ್ಯ ಎಂದು ಹೇಳಿದ್ದಾರೆ ಎನ್ನುವ ವಿಚಾರವನ್ನು ಮೂಲಗಳು ತಿಳಿಸಿವೆ.
Comments are closed.