ರಾಷ್ಟ್ರೀಯ

ಬಾಬರಿ ಮಸೀದಿ ಪರ ಹಿರಿಯ ವಕೀಲ ಧವನ್ ವಜಾ, ಇಜಾಝ್ ನೇಮಕ!

Pinterest LinkedIn Tumblr


ನವದೆಹಲಿ: ಅಯೋಧ್ಯೆ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಂ ಪರ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ಇನ್ಮುಂದೆ ಜಾಮಿಯತ್ ಪರ ವಕೀಲರಾಗಿ ಮಕ್ಬೂಲ್ ವಾದ ಮಂಡಿಸಲಿದ್ದಾರೆ.

ಬಾಬ್ರಿ ಪ್ರಕರಣದಲ್ಲಿ ವಕೀಲರಾಗಿದ್ದ ಧವನ್ ಅವರನ್ನು ವಜಾಗೊಳಿಸಿದ್ದು, ಇಜಾಝ್ ಮಕ್ಬೂಲ್ ಅವರು ಜಾಮಿಯತ್ ಪರ ವಕೀಲರಾಗಿ ವಾದ ಮಂಡಿಸಲಿದ್ದಾರೆ. ಯಾವುದೇ ಪೂರ್ವ ಮಾಹಿತಿ ನೀಡದೆ ನನ್ನ ವಜಾಗೊಳಿಸಿದ್ದಾರೆ. ಪುನರ್ ಪರಿಶೀಲನಾ ಅರ್ಜಿಯ ವಾದ ಮಂಡನೆಯಲ್ಲಿ ಅಥವಾ ಪ್ರಕರಣದಲ್ಲಿ ನಾನಿನ್ನು ಭಾಗಿಯಾಗಲ್ಲ ಎಂದು ಧವನ್ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ನಾನು ಅನಾರೋಗ್ಯದಿಂದ ಇರುವುದರಿಂದ ಬಾಬ್ರಿ ಪ್ರಕರಣದಲ್ಲಿ ವಕೀಲರಾಗಿ ಮುಂದುವರಿಸಲ್ಲ ಎಂದು ಮದನಿ ತನಗೆ ಮಾಹಿತಿ ನೀಡಿದ್ದರು. ಇದು ನಿಜಕ್ಕೂ ಮೂರ್ಖತನ. ಪ್ರಕರಣದಲ್ಲಿ ಯಾರು ವಾದಿಸಬೇಕೆಂದು ವಕೀಲರ ನೇಮಕ ಮಾಡುವ ಹಕ್ಕು ಅವರಿಗೆ ಇದೆ. ಆದರೆ ಇಜಾಝ್ ನನ್ನವಜಾಗೊಳಿಸಲು ನೀಡಿರುವ ಕಾರಣ ದ್ವೇಷದ ಮತ್ತು ಸುಳ್ಳಿನದ್ದಾಗಿದೆ ಎಂದು ಧವನ್ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.