ರಾಷ್ಟ್ರೀಯ

ಎಚ್‌ಐವಿ, ಏಡ್ಸ್‌ ಚಿಕಿತ್ಸೆಗಾಗಿ ಪರಿಣಾಮಕಾರಿಯಾಗಿರುವ ಹೊಸ ಔಷಧ

Pinterest LinkedIn Tumblr


ಹೊಸದಿಲ್ಲಿ: ದೇಶದಲ್ಲಿ ಎಚ್‌ಐವಿ ಅಥವಾ ಏಡ್ಸ್‌ ಚಿಕಿತ್ಸೆಗಾಗಿ ಪರಿಣಾಮಕಾರಿಯಾಗಿರುವ ಹಾಗೂ ಕಡಿಮೆ ದರದಲ್ಲಿ ಸಿಗುವಂಥ ‘ಡೊಲ್ಯೂಟ್‌ಗ್ರಾವಿನ್‌’ ಎಂಬ ಹೊಸ ಔಷಧವನ್ನು ಬಳಕೆಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದೆ. 2020ರ ಫೆಬ್ರವರಿ ಯಿಂದ ಈ ಔಷಧ ಭಾರತೀಯ ಮಾರುಕಟ್ಟೆ ಪ್ರವೇಶಿಸ ಲಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ನೀಡಿದ ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆಯ (ನ್ಯಾಕೊ) ಉಪ ಮಹಾ ನಿರ್ದೇಶಕ ಡಾ| ನರೇಶ್‌ ಗೋಯೆಲ್‌, ‘ಸದ್ಯಕ್ಕೆ ಎಚ್‌ಐವಿ, ಏಡ್ಸ್‌ ಚಿಕಿತ್ಸೆಗೆ ಟಿಎಲ್‌ಇ ಎಂಬ ಔಷಧಗಳ ಸಂಯುಕ್ತ ರೂಪದ ಉಪಯೋಗವಿದೆ.

ಇನ್ನು, ಮುಂದೆ ಟಿಎಲ್‌ಡಿ ಸಂಯುಕ್ತ ರೂಪದ ಡೊಲ್ಯೂಟ್‌ಗ್ರಾವಿನ್‌ ಎಂಬ ಔಷಧಿಗಳನ್ನು ಬಳಸಲು ಕೇಂದ್ರ ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಹೊಸ ಔಷಧ ಕೆಲವಾರು ಅಡ್ಡ ಪರಿಣಾಮ ಸೃಷ್ಟಿಸಿದರೂ, ಸೋಂಕು ಪೀಡಿತರಲ್ಲಿ ಹೆಚ್ಚಿನ ಮಟ್ಟದ ರೋಗ ನಿರೋಧಕ ಶಕ್ತಿ ವೃದ್ಧಿ ವೃದ್ಧಿಸಲು ಸಹಾಯ ಮಾಡುತ್ತದೆ’ ಎಂದು ತಿಳಿಸಿದ್ದಾರೆ.

Comments are closed.