ರಾಷ್ಟ್ರೀಯ

ಸೈಕಲ್‌ನಂತಿರುವ ಸ್ಮಾರ್ಟ್‌ ಎಲೆಕ್ಟ್ರಿಕ್‌ ಬೈಕ್‌

Pinterest LinkedIn Tumblr


ಸರ್ಕಾರದ ಬಿಎಸ್‌6 ನಿಬಂಧನೆಗೆ ಅನುಗುಣವಾಗಿ ವಾಹನ ತಯಾರಕ ಕಂಪೆನಿಗಳು ಇದಾಗಲೇ ಎಲೆಕ್ಟ್ರಿಕ್‌ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಹಾಗಾಗಿ ಸ್ಪ್ಯಾನಿಶ್‌ ಸ್ಟಾರ್ಟ್ಅಪ್‌ ರೇವೋಲ್ಟ್‌ ಕೂಡ ಎಕ್ಸ್‌ ಒನ್‌ (X One) ಎಲೆಕ್ಟ್ರಿಕ್‌ ಬೈಕೊಂದನ್ನು ವಾಹನ ಮಾರುಕಟ್ಟೆಗೆ ಪರಿಚಯಿಸಿದೆ.

ಮುಂದಿನ ಭವಿಷ್ಯವು ಎಲೆಕ್ಟ್ರಿಕ್‌ ಮಾದರಿಯ ವಾಹನಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಬಹುದಾದ ಕಾರಣದಿಂದ ಮುಂದಿನ ಪೀಳಿಗೆಗೆ ಸೇರಿದಂತೆ ಹಾಗೂ ಇಂದಿನ ಆಧುನಿಕ ಜಗತ್ತಿಗೂ ಸರಿಹೊಂದುವಂತೆ ಎಕ್ಸ್‌ಒನ್‌ ಇ-ಬೈಕ್‌ನ್ನು ಪ್ರಸ್ತುತಿ ಪಡಿಸಿದ್ದು, ಈ ಬೈಕ್‌ ರೈಡರ್‌ಗಳಿಗೆ ಆರೋಗ್ಯಕರವಾಗಿದ್ದು, ಸ್ಟೈಲೀ ಹಾಗೂ ಟ್ರೆಂಡೀ ಲುಕ್‌ನ್ನು ನೀಡುತ್ತದೆ. ಇದು ಬೈಕಾದರೂ ನೋಡಲು ಸೈಕಲ್‌ನಂತಿದೆ.

ಇದು ಪರಿಸರ ಮಾಲಿನ್ಯವನ್ನು ನಿಯಂತ್ರಿಸುವುದರೊಂದಿಗೆ ರೈಡರ್‌ಗಳ ಆರೋಗ್ಯವನ್ನು ಕಾಪಾಡುವಲ್ಲೂ ಸಹಕಾರಿಯಾಗಿದೆ. ಈ ಬೈಕ್‌ನ್ನು ಸ್ಮಾರ್ಟ್‌ ಯುಗಕ್ಕೆ ತಕ್ಕಂತೆ ಸ್ಮಾರ್ಟಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಮಾರ್ಟ್‌ ಎಕ್ಸ್‌ಒನ್‌ ಇ ಬೈಕ್‌ನ್ನು ಗ್ರಾಹಕರು ಸ್ಮಾರ್ಟ್‌, ಸ್ಮಾರ್ಟ್‌+ ಮತ್ತು ಎಕ್ಸ್‌ಒನ್‌ ಪವರ್‌ ಈ 3 ವಿವಿಧ ಟ್ರಿಮ್‌ಗಳಲ್ಲಿ ಖರೀದಿಸಬಹುದಾಗಿದ್ದು, ಈ ಮೂರು ಟ್ರಿಮ್‌ಗಳು ಗ್ರಾಹಕರಿಗೆ ವಿಭಿನ್ನ ರೀತಿಯ ಕಾರ್ಯಕ್ಷಮತೆಯನ್ನು ಒದಗಿಸಲಿದೆ.

ಎಕ್ಸ್ಒನ್‌ನ ಎಕ್ಸ್‌ಒನ್‌ ಸ್ಮಾರ್ಟ್‌ ಬೈಕ್‌ ಮತ್ತು ಎಕ್ಸ್‌ಒನ್‌ ಸ್ಮಾರ್ಟ್‌ ಪ್ಲಸ್‌ ಬೈಕ್‌ 250 ವ್ಯಾಟ್‌ನ ಬ್ಯಾಟರಿಯನ್ನು ಹೊಂದಿದ್ದು, ಸ್ಮಾರ್ಟ್‌ ಬೈಕ್‌ 50 ಕಿಲೋಮೀಟರ್‌ನ್ನು, ಸ್ಮಾರ್ಟ್‌ ಪ್ಲಸ್‌ 75 ಕಿಲೋಮೀಟರ್‌ ದೂರವನ್ನು ಕ್ರಮಿಸಿದರೆ, ಎಕ್ಸ್‌ಒನ್‌ ಪವರ್‌ ಬೈಕ್‌ 750 ವ್ಯಾಟ್‌ ಬ್ಯಾಟರಿಯನ್ನು ಒಳಗೊಂಡಿದ್ದು, 75 ಕಿಲೋಮೀಟರ್‌ನ್ನು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಬೈಕ್‌ನ ಮೂರು ಟ್ರಿಮ್‌ಗಳಲ್ಲಿ ಒಂದೇ ರೀತಿಯ ಅಂದರೆ ಅಲ್ಯುಮೀನಿಯಂ ಕಾಂಪೋಸಿಟ್‌ ಫ್ರೇಮ್‌ನ್ನು ಅಳವಡಿಸಲಾಗಿದೆ. ಎಕ್ಸ್‌ಒನ್ ಸ್ಮಾರ್ಟ್‌ ಮತ್ತು ಎಕ್ಸ್‌ಒನ್‌ ಸ್ಮಾರ್ಟ್‌+ಟ್ರಿಮ್‌ಗಳು ಗರಿಷ್ಠ ಮಟ್ಟದ ಟಾರ್ಕ್‌ನ್ನು ಉತ್ಪಾದಿಸಿದರೆ, ಎಕ್ಸ್‌ಒನ್‌ ಪವರ್‌ ಟ್ರಿಮ್‌ನ ಇಐವಿಎ ಡ್ರೈವ್‌ ಗರಿಷ್ಠ ಮಟ್ಟದ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಮೂರು ಟ್ರಿಮ್‌ಗಳು 42 ವೋಲ್ಟ್‌ನ ಬ್ಯಾಟರಿಯನ್ನು ಒಳಗೊಂಡಿದೆ.

ಎಕ್ಸ್‌ಒನ್‌ನ ಸ್ಮಾರ್ಟ್‌ ಮತ್ತು ಎಕ್ಸ್‌ ಒನ್‌ ಸ್ಮಾರ್ಟ್‌ + ಟ್ರಿಮ್‌ಗಳು ಸ್ಯಾಮ್ಸಂಗ್‌ನಲ್ಲಿ ಅಳವಡಿಸಲಾದ ಬ್ಯಾಟರಿ ಸೆಲ್‌ಗಳನ್ನು ಹೊಂದಿದ್ದರೆ, ಎಕ್ಸ್‌ಒನ್‌ ಪವರ್‌ ಪ್ಯಾನಸೋನಿಕ್‌ನ ಜಿಎ ಸೆಲ್‌ನ್ನು ಹೊಂದಿದೆ. ಈ ಮೂರು ಟ್ರಿಮ್‌ಗಳು ಒಂದೇ ಸಮಾನದ ಪೆಡಲ್‌ ಸಹಾಯಕವನ್ನು, ಹೈಡ್ರೋಲಿಕ್‌ ಬ್ರೇಕ್‌ನ್ನು, ರೈಡರ್‌ಗಳಿಗನುಸಾರವಾಗಿ ಆಯ್ಕೆಮಾಡಿಕೊಳ್ಳಬಹುದಾದ 7 ಸ್ಪೀಡ್‌ ಗೇರ್‌ ಹಬ್‌ನ್ನು ಅಳವಡಿಸಲಾಗಿದೆ.

ಈ ಬೈಕ್‌ ಫೇಸ್‌ ರೆಕಾಗ್ನಿಷನ್‌ ಅಂದರೆ ಬೈಕ್‌ ಯಜಮಾನರ ಮುಖವನ್ನು ಗುರುತಿಸುವ ವಿಶೇಷ ವೈಶಿಷ್ಟ್ಯತೆಯನ್ನು ಒಳಗೊಂಡಿದ್ದು, ಬೈಕ್‌ ಯಾರಿಗೆ ಸಂಬಂಧಿಸುತ್ತದೆಯೋ ಅವರನ್ನು ಹೊರತು ಪಡಿಸಿ ಬೇರಾರು ಬೈಕ್‌ನ್ನು ರೈಡ್‌ ಮಾಡಲು ಸಾಧ್ಯವಿಲ್ಲ. ಇದರ ಮುಂಭಾಗದ ಭೀಮ್‌ನಲ್ಲಿ ಆಂಡ್ರಾಯ್ಡ್‌ ಆಧಾರಿತ ಟಚ್‌ಸ್ಕ್ರೀನ್‌ನ್ನು ಅಳವಡಿಸಲಾಗಿದ್ದು, ಇದು ಕೇವಲ ತನ್ನ ಯಜಮಾನನ ಮುಖವನ್ನು ಮಾತ್ರ ಗುರುತಿಸುತ್ತದೆ ಆದ್ದರಿಂದ ಈ ಬೈಕ್‌ನ್ನು ಬೇರೆಯವರು ಅಪಹರಿಸಲು ಸಾಧ್ಯವಿಲ್ಲ.

ಬೈಕ್‌ ಸವಾರರು ಬೈಕ್‌ನ್ನು ಟರ್ನ್‌ ಮಾಡಲು ಇಚ್ಚಿಸಿದ್ದಲ್ಲಿ ಈ ಬೈಕ್‌ ವಾಯ್ಸ್‌ ಕಮಾಂಡ್‌ ನೀಡುತ್ತದೆ ಹಾಗೂ ಇಂಡಿಕೇಟರ್‌ಗಳು ಲೈಟ್‌ನ್ನು ಬೀರುತ್ತದೆ. ಒಂದು ವೇಳೆ ಗುಡ್ಡ ಅಥವಾ ಬೆಟ್ಟದ ಮೇಲೆ ಸವಾರಿಸುತ್ತಿದ್ದರೆ ಇದರ ಪುನರುತ್ಪಾದಕ ಬ್ರೇಕ್‌ನ್ನು ಒಮ್ಮೆ ಸಕ್ರೀಯಗೊಳಿಸದರೆ ಸಾಕು ಅದಾಗಿಯೇ ತನ್ನ ಟಾರ್ಕ್‌ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇನ್ನು ಎಕ್ಸ್‌ಒನ್‌ ಇ – ಬೈಕ್‌ನ ಬೆಲೆಯು 2.87 ಲಕ್ಷರೂಪಾಯಿಗಳಿಂದ 3.16 ಲಕ್ಷರೂಪಾಯಿಗಳಾಗಿರುತ್ತದೆ (ತೆರಿಗೆಯನ್ನು ಹೊರತುಪಡಿಸಿ). ಮುಂಬರುವ ದಿನಗಳಲ್ಲಿ ಇದು ಭಾರತಕ್ಕೂ ಕೂಡ ಪ್ರವೇಶಿಸಬಹುದಾಗಿದೆ.

Comments are closed.